ಕರಿಯ ಮಹಿಸನಿಗೊಂದು ಅರಿದ ತಲೆ ಹುಟ್ಟಿ ಧರೆಯಾಕಾಶವನಾರಡಿಗೊಂಡಿತ್ತಯ್ಯ. ಅರಿದ ತಲೆಯಲ್ಲಿ ಉರಿ ಹುಟ್ಟಲಾಗಿ ಶಿರ ಬೆಂದು ಕರಿಯ ಮಹಿಸನಳಿದು ಧರೆಯಾಕಾಶವ ಬೆರಸಿ ಚಿದಾಕಾಶಮಯವಾಯಿತ್ತಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.