ಕರ್ತೃತ್ವವಿಲ್ಲಾಗಿ ಕರ್ಮವಿಲ್ಲ
ಕರ್ಮವಿಲ್ಲಾಗಿ ಜನನವಿಲ್ಲ
ಜನನವಿಲ್ಲಾಗಿ ದೇಹವಿಲ್ಲ
ದೇಹವಿಲ್ಲಾಗಿ ಭೂತಾತ್ಮ ಪವಿತ್ರ. ಕರಣಾದಿ ಗುಣಂಗಳು ಮುನ್ನಿಲ್ಲ
ಹಿಂದಣ ಸ್ಥಿತಿಯಿಲ್ಲ
ಮುಂದಣ ಲಯವಿಲ್ಲ
ಆದಿ ಮಧ್ಯ ಅವಸಾನವಿಲ್ಲ
ಬಿಚ್ಚಿ ಬೇರಿಲ್ಲ
ಬೆರಸಿವೊಂದಿಲ್ಲ
ಉಪಮಾತೀತನೆಂಬೆ. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನು ನುಡಿಗಡಣವಿಲ್ಲದ ಮುಗ್ಧನು.