೧೯೨೫ರ ಸುಮಾರು ಜನಿಸಿದ, ವೆ. ಮುಂ. ಜೋಶಿರವರು ಎರಡನೆಯ ಮಹಾಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯದಲ್ಲಿ ಸೇರಿಮಲಾಯಾ, ಸಿಂಗಾಪುರ ಮೊದಲಾದ ಹೊರನಾಡುಗಳಿಗೆ ಹೋಗಿಬಂದಿದ್ದಾರೆ. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಭಿರುಚಿಯುಳ್ಳವರು. ಸೈನ್ಯ ಖಾತೆಯಿಂದ ಹೊರಬಂದ ನಂತರ ಕನ್ನಡಿಗರಿಗೆ ಉದಯೋನ್ಮುಖ ಕತೆಗಾರರೆಂದು ಪರಿಚಿತರಾಗಿದ್ದಾರೆ. ಇವರ ಮೊದಲನೆಯ ಕಥಾ ಸ೦ಗ್ರಹ "ಚಿನ್ನದ ಪದಕ" ಎಲ್ಲರಿಂದಲೂ ಮನ್ನಣೆ ಹೊಂದಿದೆ.