೬೮
ಕರ್ನಾಟಕ ಗತವೈಭವ

೧೦ನೆಯ ಪ್ರಕರಣ


ಕಲಚೂರ್ಯ-ಯಾದವ ಮುಂತಾದವರು
(೧೧೫೬-೧೧೮೩)


ಕಲಚೂರ್ಯರು

ಬಿ
ಜ್ಜಳನು ಮೊದಲು ರಾಷ್ಟ್ರಕೂಟರ ಮಹಾಮಂಡಲೇಶ್ವರನಾಗಿದ್ದಂತೆ ತೋರು ತದೆ. ಈತನು ಚಾಲುಕ್ಯರ ಕೊನೆಯ ಅರಸನಾದ ತೈಲಪನನ್ನು ಓಡಿಸಿ ಸಾರ್ವಭೌಮನಾದ ಸಂಗತಿಯನ್ನು ಹೋದ ಪ್ರಕರಣದಲ್ಲಿ ಹೇಳಿರುವವಷ್ಟೆ ! ಆದರೆ ಬಿಜ್ಜಳನು ಈ ಸಾರ್ವಭೌಮಪದವನ್ನು ಬಹಳ ದಿನಗಳು ಅನುಭವಿಸಲಿಲ್ಲ. ಕಲ್ಯಾಣದಲ್ಲುಂಟಾದ ಧರ್ಮಕ್ರಾಂತಿಯ ಗೊಂದಲದಲ್ಲಿ ಅವನು ತನ್ನ ಜೀವಕ್ಕೆ ಎರವಾಗ ಬೇಕಾಯಿತು. ಆ ಧರ್ಮಕ್ರಾಂತಿಯ ವಿವರವನ್ನು ಕೆಳಗೆ ಕೊಟ್ಟಿದೆ.
ವಿಜಾಪುರ ಜಿಲ್ಲಾ ಬಾಗೇವಾಡಿಯಲ್ಲಿ ಮಂಡಿಗೆಯ ಮಾದಿರಾಜನೆಂಬೊಬ್ಬ ಆರಾಧ್ಯ ಬ್ರಾಹ್ಮಣನಿದ್ದ ನು. ಅವನ ಮಗನೇ ಬಸವನು. ಬಿಜ್ಜಳನ ಮಂತ್ರಿಯಾದ ಬಲದೇವನು ಈ ಬಸವನ ಸೋದರಮಾವನು. ಬಸವನು ಬಲದೇವನ ಮಗಳಾದ ಗಂಗಾಂಬಿಕೆ ಎಂಬವಳನ್ನು ಮದುವೆಯಾಗಿದ್ದನು. ಬಲದೇವನು ಮರಣಹೊಂದಿದ ಬಳಿಕ, ಬಿಜ್ಜಳನು ಬಸವನನ್ನು ತನ್ನ ಮಂತ್ರಿಯನ್ನಾಗಿ ನಿಯಮಿಸಿಕೊಂಡನು. ಬಸವನಿಗೆ ನಾಗಾಂಬಿಕಾ ಎಂಬೊಬ್ಬ ಅಕ್ಕನಿದ್ದಳು. ಇವಳ ಹೊಟ್ಟೆಯಿಂದ ಚನ್ನಬಸವೇಶನು ಹುಟ್ಟಿದನು. ಬಸವನು ಲಿಂಗಾಯತ ಧರ್ಮವನ್ನು ಬೆಳೆಯಿಸಿ, ಬಹು ಜನ ಜೈನರನ್ನು ತನ್ನ ಮತಕ್ಕೆ ಸೇರಿಸಿಕೊಂಡುದರಿಂದ ಬಿಜ್ಜಳನಿಗೂ ಅವನಿಗೂ ಬೇಸರುಂಟಾಯಿತು. ಬಸವನ ಗುರುವಾದ ಅಲ್ಲಮಪ್ರಭು ಶ್ರೀಶೈಲಕ್ಕೆ ಹೋಗಿ ಐಕ್ಯನಾಗಲು, ಬಸವನು ಸಹ ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯಗೊಂಡನು. ಬಳಿಕ ಬಿಜ್ಜಳನು ಚನ್ನಬಸವೇಶನಿಗೆ ಮಂತ್ರಿಪದವನ್ನು ಕೊಟ್ಟನು. ಲಿಂಗಾಯತ ಮತಸ್ಥರಾದ ಹಳ್ಳಯ್ಯ ಮಧುವಯ್ಯ ಎಂಬಿಬ್ಬರು ಬೇರೆ ಬೇರೆ ಕುಲದವರು ಪರಸ್ಪರ ಬಾಂಧವ್ಯವನ್ನು ಬೆಳಿಸಿದರೆಂಬ ಕಾರಣದಿಂದ ಬಿಜ್ಜಳನು ಅವರನ್ನು ಆನೆಯ ಕಾಲಿಗೆ ಕಟ್ಟಿ ಎಳಿಸಲು, ದೊರೆಯನ್ನು
೧೦ನೆಯ ಪ್ರಕರಣ - ಕಲಚೂರ್ಯರು
೬೯

ಶಿಕ್ಷಿಸಬೇಕೆಂದು ಜಗದೇವ ಬೊಮ್ಮಯ್ಯರು ಸಂಕಲ್ಪಿಸಿ, ಚನ್ನಬಸವೇಶನ ಅಪ್ಪಣೆಯನ್ನು ಪಡೆದು, ದೊರೆಯ ಬಳಿಯಲ್ಲಿ ದೀವಟಿಗೆಯ ಉದ್ಯೋಗವನ್ನು ಸ್ವೀಕರಿಸಿದರು. ಮುಂದೆ ಹೊತ್ತು ಸಾಧಿಸಿ, ಜಗದೇವ-ಮಲ್ಲಯ್ಯ- ಬೊಮ್ಮಯ್ಯರು ಅರಸನನ್ನು ಇರಿದು ಕೊಂದರು. ಇದರಿಂದ ಪಟ್ಟಣದಲ್ಲಿ ಹಾಹಾಕಾರವೆದ್ದಿತು. ಈ ಸುದ್ದಿಯನ್ನು ಕೇಳಿ, ಚನ್ನಬಸವನು ಇಲ್ಲಿರುವುದು ತಕ್ಕದಲ್ಲೆಂದೆಣಿಸಿ, ಶಿವಶರಣರೊಡನೆ ಉಳುವಿಗೆ ಹೊರಟನು. ಆಳಿಯ ಬಿಜ್ಜಳನು ಮಹಾಸೇನೆಯೊಡನೆ ಬಂದು, ಅವರ ಮೇಲೆ ಬಿದ್ದು ಅಪಜಯಪಟ್ಟು ಹಿಂದಿರುಗಿದನು. ಬಳಿಕ ಚನ್ನಬಸವನು ತನ್ನ ಸಂಗಡಿಗರೊಡನೆ ಉಳುವಿಯ ಮಹಾಮನೆಗೆ ಹೋಗಿ ಅಲ್ಲಿಯೇ ಬಯಲಾದನು.
ಜೈನರ ಕಥೆಯು ಇದರಿಂದ ಭಿನ್ನವಾಗಿದೆ. ಅವರು ಬಿಜ್ಜಳನನ್ನು ಕೊಂದ ದೋಷವನ್ನು ಬಸವನ ಮೇಲೆ ಹೊರಿಸುತ್ತಾರೆ. ಆದರೆ ಅದು ಏನೇ ಇರಲಿ, ಬಸವ- ಚನ್ನಬಸವೇಶರು ಧಾರ್ಮಿಕ ಗುರುಗಳಿದ್ದಂತೆಯೇ ರಾಜಕಾರಣ ಪಟುಗಳೂ ಇದ್ದರೆಂದು ಮಾತ್ರ ನಿರ್ವಿವಾದವಾಗಿ ಹೇಳಬಹುದು. ಸಮಾಜ ಸುಧಾರಣೆಯನ್ನು ಮಾಡಲಿಚ್ಚಿಸುವವರೆಲ್ಲರೂ ಲಿಂಗಾಯತ ಧರ್ಮದವರು ಸ್ವೀಕರಿಸಿದ ಪದ್ಧತಿಯನ್ನು ಸೂಕ್ಷವಾಗಿಯೂ ಕೂಲಂಕಷವಾಗಿಯೂ ಅಭ್ಯಾಸಮಾಡುವಂತಿದೆ. ಧರ್ಮಕ್ಕೂ ರಾಜಕಾರಣಕ್ಕೂ ಹಾಕಿರುವ ಈ ತಳಕು ನಮ್ಮ ಕರ್ನಾಟಕ ಇತಿಹಾಸದಲ್ಲಿ ಪದೆ ಪದೆ ಕಾಣಬರುತ್ತದೆ.

ಬಿಜ್ಜಳನ ಮರಣದ ನಂತರ ಈ ಕಲಚೂರ್ಯ ವಂಶವು ಬಹಳ ದಿವಸ ಬಾಳಲಿಲ್ಲ.
೭೦
ಕರ್ನಾಟಕ ಗತವೈಭವ

ದೇವಗಿರಿ ಯಾದವರ ವಂಶಾವಳಿ


ಭಿಲ್ಲಮ (೧೧೮೭-೧೧೯೧)
ಜೈತುಗಿ, ಜೈಪಾಲ (೧೧೯೧-೧೨೧೦)
ಸಿಂಘಣ (೧೨೧೦-೧೨೪೭)
ಜೈತುಗ


ಕಂಧರ, ಕನ್ನರ, ಕೃಷ್ಣ ಮಹಾದೇವ
(೧೨೪೭-೧೨೬೦) (೧೨೬೦-೧೨೭೧)
ರಾಮಚಂದ್ರ (೧೨೭೧-೧೩೦೯)
ಶಂಕರದೇವ (೧೩೦೯-೧೩೧೨)

೧೦ನೆಯ ಪ್ರಕರಣ - ದೇವಗಿರಿ ಯಾದವರು
೭೧

ದೇವಗಿರಿ ಯಾದವರು
(೧೧೧೩-೧೩೧೮ ).

ಚಾ
ಲುಕ್ಯರ ಅಳಿಗಾಲಕ್ಕೆ ಆರಂಭವಾದಾಗ, ಹೊಯ್ಸಳ ಯಾದವರ ಅರಸನಾದ ವಿಷ್ಣುವರ್ಧನನು, ಕೃಷ್ಣಾನದಿಯ ಹತ್ತಿರವಿರುವ ಚಾಲುಕ್ಯರ ಸೀಮೆಯನ್ನು ಕಿತ್ತುಕೊಳ್ಳಲಿಕ್ಕೆ ಪ್ರಯತ್ನಿಸಿದ್ದನು. ಆದರೆ ಆಗಿನ ಚಾಲುಕ್ಯರ ಅರಸನು ಪ್ರಬಲನಾಗಿದ್ದುದರಿಂದ ವಿಷ್ಣುವರ್ಧನನ ಆಟವು ಸಾಗಲಿಲ್ಲ. ಮುಂದೆ ಚಾಲುಕ್ಯ ವಂಶವು ಅಡಗಿ, ಕಲಚೂರಿವಂಶವು ಕೂಡ ನಷ್ಟವಾಗಿ, ರಾಜ್ಯದಲ್ಲಿ ಗೊಂದಲವೆದ್ದಾಗ, ವಿಷ್ಣುವರ್ಧನನ ಮೊಮ್ಮಗನಾದ ವೀರಬಲ್ಲಾಳನು ಬೊಮ್ಮನೊಡನೆ ಕಾಳಗವಾಡಿ, ಕೆಲವು ಸೀಮೆಯನ್ನು ತೆಗೆದುಕೊಂಡನು. ಇದೇ ಸಂಧಿಯನ್ನು ಸಾಧಿಸಿ, ಉತ್ತರದಲ್ಲಿಯೂ ಯಾದವರು ಸುತ್ತ ಮುತ್ತಲೂ ತಮ್ಮ ಕಾಲು ಚಾಚಿದರು. ಭಿಲ್ಲಮನು ರಾಜ್ಯ ವಿಸ್ತಾರವನ್ನು ಮಾಡಿ ಕಲ್ಯಾಣದ ಅರಸೊತ್ತಿಗೆಯನ್ನು ಎತ್ತಿ ಹಾಕಿದನು. ಅವನು ಕೃಷ್ಣೆಯ ಉತ್ತರಕ್ಕಿರುವ ಸೀಮೆಗೆಲ್ಲಾ ಅರಸನಾಗಿ, ೧೧೮೭ ನೆಯ ಇಸವಿಯಲ್ಲಿ ದೇವಗಿರಿ ಪಟ್ಟಣವನ್ನು ಸ್ಥಾಪಿಸಿ ಅಲ್ಲಿ ಆಳತೊಡಗಿದನು. ಇತ್ತ ಹೊಯ್ಸಳ ಅರಸನಾದ ವೀರಬಲ್ಲಾಳನು ಉತ್ತರಕ್ಕೆ ಕೈಚಾಚುತ್ತಿದ್ದನು. ಈ ಮೇರೆಗೆ ಹೊಯ್ಸಳ ಯಾದವರಿಗೂ ದೇವಗಿರಿ ಯಾದವರಿಗೂ ಕೃಷ್ಣಯ ಹತ್ತಿರವಿರುವ ಸೀಮೆಯ ಒಡೆತನಕ್ಕಾಗಿ ಮೇಲೆ ಮೇಲೆ ಕಾಳಗಗಳೆದ್ದ ವು, ಕೊನೆಗೆ ಲಕ್ಕುಂದಿಯಲ್ಲಾದ ದೊಡ್ಡ ಕಾಳಗದಲ್ಲಿ, ಹೊಯ್ಸಳ ಅರಸನಾದ ವೀರಬಲ್ಲಾಳನು, ಭಿಲ್ಲಮನ ಮಗನಾದ ಜೈತೃ ಸಿಂಹನನ್ನು ಸಂಪೂರ್ಣವಾಗಿ ಸೋಲಿಸಿ, ಕುಂತಳ ದೇಶಕ್ಕೆ ಅಧಿಪತಿಯಾದನು. ಭಿಲ್ಲಮನ ತರುವಾಯ ೧೧೧೩ ನೆಯ ಶಕದಲ್ಲಿ, ಅವನ ಮಗನಾದ ಜೈತೃ ಪಾಲನು ಅಥವಾ ಜೈತುಗಿಯು ಪಟ್ಟವೇರಿದನು. ಪ್ರಸಿದ್ಧ ಜ್ಯೋತಿಷ್ಯನಾದ ಭಾಸ್ಕರಾಚಾರ್ಯರ ಮಗನಾದ ಲಕ್ಷ್ಮೀಧರನು ಈ ಜೈತೃಪಾಲನ ಆಸ್ಥಾನದಲ್ಲಿ ಪಂಡಿತನಾಗಿದ್ದನು.
ನಂತರ ಅವನ ಮಗನಾದ ಸಿಂಘಣನು ಅರಸನಾದನು. ದೇವಗಿರಿ ಯಾದವರೊಳಗೆ ಇವನೇ ಶ್ರೇಷ್ಟನು, ಈತನು ಮಾಳವ ಮುಂತಾದ ಅರಸರನ್ನು ಗೆದ್ದನು, ಮಧುರೆಯ ಮತ್ತು ಕಾಶಿಯ ಅರಸರು ಇವನಿಂದ ಕೊಲ್ಲಲ್ಪಟ್ಟರು. ಈತನು ಹೊಯ್ಸಳರನ್ನು ಗೆದ್ದು ಉತ್ತರಸೀಮೆಯನ್ನು ಸೆಳೆದುಕೊಂಡನು. ಸಿಂಘ
೭೨
ಕರ್ನಾಟಕ ಗತವೈಭವ

ಣನು ಗುಜರಾಥದ ಮೇಲೂ ಅನೇಕಾವರ್ತಿ ದಾಳಿಯನ್ನು ಮಾಡಿದನು. ಈ ಸಿಂಘಣನ ಮಗನಾದ ರಾಮನು, ಗುಜರಾಥದಲ್ಲಿ ಆಳುತ್ತಿರುವಾಗ ಒಂದು ಕಾಳಗದಲ್ಲಿ ಮಡಿದನು. ಆಗ ಅವನ ಮಗನು ಚಿಕ್ಕವನಾಗಿದ್ದುದರಿಂದ, ಅವನ ತಂಗಿಯಾದ ಲಕ್ಷ್ಮಿಯು, ಆ ದೇಶವನ್ನು ಕೆಲವು ಕಾಲಪರ್ಯಂತ ಆಳಿದಳು, ಸಂಘಣನು 'ಚಿಕ್ಕ' ನೆಂಬವನ ಮಗನಾದ ಬಿಜ್ಜಣ್ಣನನ್ನು ದಕ್ಷಿಣದೇಶಕ್ಕೆ ಅಧಿಕಾರಿಯನ್ನಾಗಿ ನೇಮಿಸಿದ್ದನು. ಈ ಬಿಜ್ಜಣ್ಣನು ರಟ್ಟರನ್ನೂ, ಕದಂಬರನ್ನೂ, ಗುತ್ತರನ್ನೂ, ಪಾಂಡ್ಯರನ್ನೂ ಗೆದ್ದು, ಹೊಯ್ಸಳ ರಾಜ್ಯವನ್ನು ತೆಗೆದುಕೊಂಡು ಕಾವೇರೀ ನದಿಯ ದಡದಲ್ಲಿ ತನ್ನ ವಿಜಯಸ್ತಂಭವನ್ನೂರಿದನು. ಆದುದರಿಂದ, ಈ ಸಿಂಘಣನ ಕಾಲದಲ್ಲಿ ಕೆಲವು ಕಾಲ ರಾಜ್ಯಗಳ ವಿಸ್ತಾರವು ಅತಿಶಯವಾಗಿ ಇದ್ದಂತೆ ತೋರುತ್ತದೆ. ಸಿಂಘಣನಿಗೆ ಪೃಥ್ವಿ ವಲ್ಲಭನೆಂದು ಬಿರುದು ಇತ್ತು. ದೇವಗಿರಿ ಯಾದವರು ತಾವು ವಿಷ್ಣು ವಂಶೋದ್ಭವರೆಂದೂ, ದ್ವಾರಾವತೀ ಪುರವರಾಧೀಶ್ವರರೆಂದೂ ಹೇಳಿಕೊಳ್ಳುವರು. ಭಾಸ್ಕರಾಚಾರ್ಯರ ಮೊಮ್ಮಗನಾದ ಚಂಗದೇವನು ಸಿಂಘಣನ ಆಸ್ಥಾನದಲ್ಲಿ ಜ್ಯೋತಿಷ್ಯನಾಗಿದ್ದನು.
ನಂತರದಲ್ಲಿ ಮಹಾದೇವನೇ ಹೆಸರಾದ ಅರಸನು. ಈತನು ತಲುಂಗ, ಗುರ್ಜರ, ಕರ್ಣಾಟ, ಕೊಂಕಣ ಮುಂತಾದ ಅರಸರನ್ನು ಗೆದ್ದನು, ಕರ್ಣಾಟರೆಂದರೆ ಹೊಯ್ಸಳ ಅರಸರು.

ವಂಶದ ಕೊನೆಯ ಅರಸನು ರಾಮಚಂದ್ರನು (೧೨೭೧-೧೩೦೯). ರಾಮಚಂದ್ರನ ರಾಜ್ಯವು ಮೈಸೂರಿನವರೆಗೆ ಹಬ್ಬಿತ್ತು. ಪ್ರಸಿದ್ಧ ಧರ್ಮಶಾಸ್ತ್ರ ಕಾರನಾದ ಹೇಮಾದ್ರಿಯು, ಮಹಾದೇವ ಮತ್ತು ರಾಮಚಂದ್ರ ಇವರ ಆಳಿಕೆಯಲ್ಲಿ ಮಂತ್ರಿಯಾಗಿದ್ದನು. ೧೨೯೬ನೆಯ ಇಸವಿಯಲ್ಲಿ ಅಲ್ಲಾವುದ್ದೀನ ಖಿಲಜಿಯು ರಾಮಚಂದ್ರನನ್ನು ಸೋಲಿಸಿದನು. ಅನಂತರ ಮಲಿಕಕಾಫರನು ರಾಮಚಂದ್ರನನ್ನು ಕೊಂದು ದೇವಗಿರಿಯನ್ನು ವಶಮಾಡಿಕೊಂಡನು.
೧೦ನೆಯ ಪ್ರಕರಣ - ಹೊಯ್ಸಳ ಯಾದವರು
೭೩

ಹೊಯ್ಸಳ ಯಾದವರು


ಸಳ, ಹೊಯ್ಸಳ (೧೦೦೬)
↓ *
ವಿನಯಾದಿತ್ಯ, ತ್ರಿಭುವನಮಲ್ಲ-ಹೊಯ್ಸಳ (೧೦೪೭-೧೧೦೦)
ಎರೆಯುಂಗ (ಯುವರಾಜ ೧೦೬೩-೧೦೯೫)


ಬಲ್ಲಾಳ (೧ನೇ) ಬಿಟ್ಟಿದೇವ, ವಿಷ್ಣು ವರ್ಧನ
(೧೧೦೦-೧೧೦೬) (೧೧೧೧-೧೧೪೧)
ನರಸಿಂಹ (೧ನೇ) ಪ್ರತಾಪನರಸಿಂಹ (೧೧೪೧-೧೧೭೩)
ಬಲ್ಲಾಳ (೨ನೇ), ವೀರಬಲ್ಲಾಳ
ಶನಿವಾರಸಿದ್ಧಿ, ಗಿರಿದುರ್ಗವಲ್ಲ, ಯಾದವನಾರಾಯಣ

(೧೧೭೩-೧೨೨೦)

ನರಸಿಂಹ (೨ನೇ), ವೀರನರಸಿಂಹ (೧೨೨೦-೧೨೩೫)
ಸೋಮೇಶ್ವರ, ವೀರಸೋಮೇಶ್ವರ (೧೨೩೩-೧೨೫೪)
ನರಸಿಂಹ (೩ನೇ), ವೀರನರಸಿಂಹ (೧೨೫೪-೧೨೯೧)
ಬಲ್ಲಾಳ (೩ನೇ), ವೀರಬಲ್ಲಾಳ (೧೨೯೧-೧೩೪೨)
ಬಲ್ಲಾಳ (೪ನೇ), (೧೩೪೩)

*ಈ ಪ್ರಕಾರ ಚಿಹ್ನವಿದ್ದಲ್ಲಿ ಕೆಳಗಿನವನು ಸಾಕ್ಷಾತ್ ಮಗನಲ್ಲ, ವಂಶಜನೆ೦ದು ತಿಳಿಯಬೇಕು.
೭೪
ಕರ್ನಾಟಕ ಗತವೈಭವ

ಹೊಯ್ಸಳ-ಯಾದವರು
(೧೧೧೬-೧೩೪೬)


ಚೋ
ಳರು ಗಂಗ ರಾಜರನ್ನು ೧೦೦೪ರಲ್ಲಿ ಮುರಿದ ನಂತರ ಮೈಸೂರಿನ ಪಶ್ಚಿಮದಲ್ಲಿ ಹೊಯ್ಸಳರು ತಲೆಯೆತ್ತಿದರು. ಮುಂದೆ ಅವರು ೧೧೧೬ರಲ್ಲಿ ಚೋಳರನ್ನು ಚದರಿಸಿ ತಾವೇ ರಾಜರಾಗಿ ೧೪ನೆಯ ಶತಮಾನದವರೆಗೆ ಆಳಿದರು. ಈ ವಂಶದ ಮೂಲಪುರುಷನು ಸಳನೆಂಬವನು. ಆತನು ಸುದತ್ತನೆಂಬೊಬ್ಬ ಬ್ರಾಹ್ಮಣ ಯತಿಯಲ್ಲಿ ವಿದ್ಯೆಯನ್ನು ಕಲಿಯುತ್ತಿದ್ದಾಗ, ಒಮ್ಮೆ ವಾಸಂತಿಕಾದೇವಿಯ ಗುಡಿಗೆ ಪೂಜೆಗೆ ಹೋಗಿದ್ದನು. ಆಗ ಅಲ್ಲಿ ಒಂದು ದೊಡ್ಡ ಹುಲಿಯು ಬಂದಿತು. ಕೂಡಲೆ ಆ ಯತಿಯು, ತನ್ನ ಕೈಯೊಳಗಿನ ಬೆತ್ತವನ್ನು ಅವನಿಗೆ ಕೊಟ್ಟು ಆ ಹುಲಿಯನ್ನು 'ಹೊಯ್ಯ' ಕ್ಕೆ ಹೇಳಿದನು. ಸಳನು ಆ ಮೇರೆಗೆ ಅದನ್ನು ಕೊಂದನು. ಅಂದಿನಿಂದ ಅವನ ವಂಶಕ್ಕೆ ಹೊಯ್ಸಳವೆಂದು ಹೆಸರು ಬಂತು. ಈ ಸಳನು ಹುಲಿ ಹೊಡೆಯುವ ಚಿತ್ರಗಳನ್ನೊಳಗೊಂಡ ಕಟ್ಟಡಗಳೆಲ್ಲವೂ ಈ ವಂಶದವರವೇ.

ಕೆಳಗೆ ತಂಜಾವರದಿಂದ ಮೇಲ್ಗಡೆ ಸೊಲ್ಲಾಪುರದವರೆಗೆ ಈ ವಂಶದ ಲೇಖಗಳು ದೊರೆಯುತ್ತವೆ. ಹೊಯ್ಸಳರು ಮೊದಲು ಕಲ್ಯಾಣ ಚಾಲುಕ್ಯರ ಮಾಂಡಲಿಕರಾಗಿದ್ದರು. ಆದರೆ ಮುಂದೆ ವಿಷ್ಣು ವರ್ಧನನ ಕಾಲದಲ್ಲಿ ಇವರು ಸ್ವತಂತ್ರರಾಗಿ ಆಳುತ್ತಿದ್ದರು. ಇವರ ರಾಜಧಾನಿಯು ಮೊದಲು ಬೇಲೂರು, ಅನಂತರ ಹಳೇಬೀಡು ಅಥವಾ ದ್ವಾರಸಮುದ್ರ.
ವಂಶದಲ್ಲಿ ವಿನಯಾದಿತ್ಯ, ವಿಷ್ಣು ವರ್ಧನ ಇವರೇ ಬಲವಾದ ಅರಸರು, ಬಿಟ್ಟಿದೇವ ಅಥವಾ ವಿಷ್ಣುವರ್ಧನನು ಈ ವಂಶಕ್ಕೆ ಮೊದಲು ಪೂರ್ಣ ಸ್ವಾತಂತ್ರವನ್ನು ಕೊಟ್ಟವನು. ಇವನು ರಾಮಾನುಜಾಚಾರ್ಯರ ಉಪದೇಶದಿಂದ ಜೈನಮತವನ್ನು ಬಿಟ್ಟು ವೈಷ್ಣವ ಮತವನ್ನಂಗೀಕರಿಸಿದ ಸಂಗತಿಯು ಎಲ್ಲ ರಿಗೂ ತಿಳಿದಿದೆ. ಈತನು ಮೈಸೂರು ಪ್ರಾಂತದಿಂದ ಚೋಳರನ್ನು ಹೊಡೆದಟ್ಟಿದನು. ಈತನು ಶೂರನಾದ ಅರಸನಾಗಿದ್ದನು. ತಲಕಾಡು, ಉಚ್ಚಂಗಿ, ಬನವಾಸಿ ಮುಂತಾದ ನಾಡುಗಳ ಅರಸರನ್ನು ಗೆದ್ದನು. ತಳಕಾಡು, ದ್ವಾರಸಮುದ್ರ, ಬಂಕಾಪುರ ಮುಂತಾದುವುಗಳು ಬೇರೆಬೇರೆ ಕಾಲಕ್ಕೆ ಈತನ ರಾಜಧಾನಿಗಳಾಗಿದ್ದುವು.

೨ನೆಯ ಬಲ್ಲಾಳ ಅಥವಾ ವೀರಬಲ್ಲಾಳನೇ ಈತನ ತರುವಾಯದ ಪ್ರಸಿದ್ಧ.
೧೦ನೆಯ ಪ್ರಕರಣ - ಹೊಯ್ಸಳ ಯಾದವರು
೭೫

ರಾಜನು, ಈತನು ೧೧೭೩ ನೆಯ ಇಸವಿಯ ಜುಲೈ ೨೨ನೆಯ ದಿವಸ ದ್ವಾರಸಮುದ್ರದಲ್ಲಿ ಪಟ್ಟವೇರಿದನು. ಈತನು ಚಂಗಾಳ ಉಚ್ಚಂಗಿಯ ಪಾಂಡ್ಯ ಕಲಚೂರ್ಯ ಮುಂತಾದ ಅರಸರನ್ನು ಸೋಲಿಸಿದನು. ಆದರೆ ಎಲ್ಲಕ್ಕೂ ಮೇಲಾದ ಈತನ ಶೂರತನದ ಕೃತ್ಯವಾವುದೆಂದರೆ ಸೇವುಣ ಅಂದರೆ ದೇವಗಿರಿ ಯಾದವರ ದೊಡ್ಡ ಸೈನ್ಯವನ್ನು ಸೊರಟೂರಿನಲ್ಲಿ ಸೋಲಿಸಿದ್ದು. ಈ ಸೈನ್ಯದಲ್ಲಿ ಎರಡು ಲಕ್ಷ ಕಾಲಾಳುಗಳಿದ್ದುವು. ೧೧೯೩ರಲ್ಲಿ ಇವನು ಲಕ್ಕುಂದಿಯಲ್ಲಿ ವಾಸವಾಗಿದ್ದನು. ಆದರೆ ಮುಂದೆ ರಾಣೇಬೆನ್ನೂರ ತಾಲುಕಿನಲ್ಲಿರುವ ಹುಲ್ಲೂರ ಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು, ಈತನು ೪೭ ವರ್ಷಗಳವರೆಗೆ ವೈಭವದಿಂದ ಆಳಿ ೧೨೨೦ರಲ್ಲಿ ಮಡಿದನು. ಈತನು ಮಡಿದ ಕೂಡಲೆ ಈತನ ಪರಮ ಭಕ್ತನಾದ ಲಕ್ಷ್ಯನೆಂಬವನೂ ಇವನ ಹೆಂಡತಿಯೂ ಒಂದು ಸಾವಿರ ಜನ ವೀರರೂ ಈತನ ಮೇಲಿನ ಪ್ರೇಮಾತಿಶಯದ ಮೂಲಕ ಆತ್ಮಹತ್ಯೆವನ್ನು ಮಾಡಿಕೊಂಡರು!
ತನ ತರುವಾಯದಲ್ಲಿ ಪಟ್ಟವೇರಿದ ೨ನೆಯ ನರಸಿಂಹನು ಪರಾಕ್ರಮಿಯಾದ ಅರಸನೇ. ಇವನು ಅನೇಕ ರಾಜ್ಯಗಳನ್ನು ಗೆದ್ದು ರಾಮೇಶ್ವರದಲ್ಲಿ ವಿಜಯ ಸ್ತಂಭವನ್ನೂರಿದನು. ಈತನು ದೇವಗಿರಿ ಯಾದವರನ್ನು ಸೋಲಿಸಿದನು.
ನರಸಿಂಹನ ಮಗನಾದ ಸೋಮೇಶ್ವರನೂ ಶೂರನೇ. ಆದರೆ ಈ ಸೋಮೇಶ್ವರನ ಮರಣದ ನಂತರ ಈ ರಾಜ್ಯದಲ್ಲಿ ಎರಡು ಭಾಗಗಳಾಗಿ ಕನ್ನಡ ರಾಜ್ಯವು ೩ನೆಯ ನರಸಿಂಹನ ಪಾಲಿಗೆ ಬಂದಿತು. ತಮಿಳು ರಾಜ್ಯವು ರಾಮನಾಥನೆಂಬ ಅವನ ತಮ್ಮನ ಪಾಲಿಗೆ ಹೋಯಿತು. ೩ನೆಯ ನರಸಿಂಹನು ದೇವಗಿರಿ ಯಾದವರನ್ನು ಬೆಳವಡಿಯಲ್ಲಿ ಸೋಲಿಸಿದನು. ಆದರೆ ಮುಂದೆ ೩ ನೆಯ ಬಲ್ಲಾಳನ ಕಾಲಕ್ಕೆ ಇವರ ರಾಜ್ಯದಲ್ಲಿ ಮುಸಲ್ಮಾನರ ಪ್ರವೇಶವಾಗಿ ಇವರ ವಂಶವು ನಷ್ಟ ವಾಯಿತು.

ಕೊಲ್ಲಾಪುರದ ಶಿಲಾಹಾರರು


ಲ್ಲಿಯವರೆಗೆ ನಾವು ಸ್ವತಂತ್ರ ರಾಜವಂಶಗಳನ್ನು ಹೇಳಿದೆವು. ಇನ್ನು ಮುಂದೆ ಸಾಗುವ ಮೊದಲು, ರಾಷ್ಟ್ರಕೂಟರ ಕಾಲಕ್ಕೂ ಚಾಲುಕ್ಯರ ಕಾಲಕ್ಕೂ ಪ್ರಾಬಲ್ಯಕ್ಕೆ ಬಂದ ಕೆಲವು ಮಾಂಡಲಿಕ ರಾಜವಂಶಗಳನ್ನು ಕುರಿತು ಹೇಳುವೆವು.
೭೬
ಕರ್ನಾಟಕ ಗತವೈಭವ

ಟ್ಟು ಶಿಲಾಹಾರ ಮನೆತನಗಳು ಮೂರು. ಅವೆಲ್ಲ ರಾಷ್ಟ್ರಕೂಟರ ಕಾಲದಲ್ಲಿ ತಲೆಯೆತ್ತಿದುವು. ಉತ್ತರ ಕೊಂಕಣದಲ್ಲಿ ೧೪೦೦ ಹಳ್ಳಿಗಳಿದ್ದು , ಪುರಿ ಎಂಬುದು ಈ ಉತ್ತರ ಕೊಂಕಣದ ಶಿಲಾಹಾರವಂಶದ ರಾಜಧಾನಿಯು. ರಾಷ್ಟ್ರಕೂಟರ ಅರಸನಾದ ಅಮೋಘವರ್ಷ ಅಥವಾ ನೃಪತುಂಗ (೮೧೫-೮೭೭) ನ ಕಾಲಕ್ಕೆ ಅಲ್ಲಿ ಫುಲ್ಲಶಕ್ತಿಯೆಂಬವನು ಅವನ ಮಾಂಡಲಿಕನಾಗಿ ಆಳುತ್ತಿದ್ದನು. ದಕ್ಷಿಣ ಕೊಂಕಣದ ಶಿಲಾಹಾರರ ರಾಜಧಾನಿಯು ಖಾರೆ ಪಟ್ಟಣವಾಗಿತ್ತು. ಈ ಶಿಲಾಹಾರರು ಅಷ್ಟು ಪ್ರಸಿದ್ಧರಾಗಿರಲಿಲ್ಲ. ಕೊಲ್ಲಾಪುರದ ಶಿಲಾಹಾರವಂಶವೇ ಮೂರನೆಯ ಶಿಲಾಹಾರ ವಂಶ. ಕೊಲ್ಲಾಪುರ, ಮಿರಜ, ಕರ್ಹಾಡ ಪ್ರಾಂತಗಳು ಇವರ ವಶದಲ್ಲಿದ್ದುವು. ಇದು ಎಲ್ಲಕ್ಕೂ ಈಚೆಯ ಮನೆತನವು. ರಾಷ್ಟ್ರಕೂಟ ವಂಶವು ಹಾಳಾಗುವ ಕೊನೆ ಕೊನೆಗೆ ಈ ಮನೆತನವು ಉದಯಕ್ಕೆ ಬಂದಿತು. ಇವರ ವಂಶಾ ವಳಿಯನ್ನು ಇಲ್ಲಿ ಕೊಟ್ಟಿದೆ.

ಜಟ್ಟಿಗ (೧ನೇ)
ಜಟ್ಟಿಗ (೨ನೇ)




ಗೋಂಕ ಗುಹಲ ಕೀರ್ತಿರಾಜ ಚಂದ್ರಾದಿತ್ಯ
ಮಾರಸಿಂಹ
(೧೦೫೮)



ಭೋಜ ಗಂಡರಾದಿತ್ಯ
ವಿಜಯಾದಿತ್ಯ
ಭೋಜ (೨ನೇ)
(೧೧೭೮)
ಗಂಡರಾದಿತ್ಯನೆಂಬವನು ಪ್ರಸಿದ್ಧ ರಾಜನು. ಮಿರಜ ಸಂಸ್ಥಾನದಲ್ಲಿಯ ಇರಕೂಡಿಯಲ್ಲಿ “ಗಂಡಸಮುದ್ರ'ವೆಂಬ ಸರೋವರವನ್ನು ಕಟ್ಟಿಸಿದನು.
೧೦ನೆಯ ಪ್ರಕರಣ - ಸವದತ್ತಿಯ ರಟ್ಟರು
೭೭

ಸವದತ್ತಿಯ ರಟ್ಟರು

ರಾ
ಷ್ಟ್ರಕೂಟರ ಕಾಲದಲ್ಲಿಯೂ ಚಾಲುಕ್ಯರ ಕಾಲದಲ್ಲಿಯೂ ರಟ್ಟರು ಮಾಂಡಲಿಕ ರಾಜರಾಗಿದ್ದರು. ಮುಂದೆ ಕೆಲವು ದಿವಸ ಸ್ವತಂತ್ರರಾಗಿ ಆಳಿದರು. ಅನಂತರ ದೇವಗಿರಿಯ ಯಾದವರಿಗೆ ತುತ್ತಾದರು. ಇವರ ರಾಜಧಾನಿಯು ಮೊದಲು ಸುಗಂಧವರ್ತಿ ಅಥವಾ ಸವದತ್ತಿಯಲ್ಲಿ ಇತ್ತು. ಮುಂದೆ ವೇಣುಗ್ರಾಮ ಅಥವಾ ಬೆಳಗಾಂವಿಗೆ ಅದನ್ನು ನೂಕಿಸಿದರು. ಇವರ ಶಿಲಾಲೇಖಗಳು ಸೊಗಲ, ನೇಸರ್ಗಿ ಕೊಣ್ಣೂರ, ರಾಯಬಾಗ ಮುಂತಾದ ಊರುಗಳಲ್ಲಿ ದೊರೆಯುತ್ತವೆ. ಇವರು ಲತ್ತನೂರಪುರವರಾಧೀಶ್ವರರೆಂದು ಹೇಳಿಕೊಳ್ಳುತ್ತಾರೆ. ಇವರು ಜೈನರು. ಸುವರ್ಣ ಗರುಡಧ್ವಜವು ಇವರ ಪತಾಕೆಯು; ಇವರು ಸಿಂದೂರ ಲಾಂಛನರು, ಇವರ ವಂಶಾವಳಿಯನ್ನು ಕೆಳಗೆ ಕಾಣಿಸಿದೆ.
ಪೃಥ್ವಿವರ್ಮ
ಶಾಂತಿವರ್ಮ
ಕಾರ್ತವೀರ್ಯ (೯೮೦)
ಅಂಕ (೧೦೪೮)
ಕಾರ್ತವೀರ್ಯ (೧೦೮೬)
ಸೇನೆ
ಕಾರ್ತವೀರ್ಯ
ಲಕ್ಷೀದೇವ (೧೨೦೮)


ಕಾರ್ತವೀರ್ಯ ಮಲ್ಲಿಕಾರ್ಜುನ
ಲಕ್ಷ್ಮೀದೇವ
೭೮
ಕರ್ನಾಟಕ ಗತವೈಭವ

ಈ ಬಗೆಯಾಗಿ ನಾವು ಈ ಪ್ರಕರಣದಲ್ಲಿ ಕಲಚೂರ್ಯ ಯಾದವ ಮುಂತಾದ ಅನೇಕ ರಾಜವಂಶಗಳನ್ನು ಹೇಳಿದೆವು. ಕಲ್ಯಾಣ ಚಾಲುಕ್ಯರ ನಂತರ ಕಲಚೂರ್ಯರು ಅವರ ರಾಜ್ಯಕ್ಕೆ ಅರಸರಾಗಿ ಆಳಿದರೂ ಅವರು ಬಹಳ ದಿವಸ ಆಳಲಿಲ್ಲ. ಮುಂದೆ ಆ ರಾಜ್ಯವು ಎರಡು ತುಂಡಾಗಿ ಉತ್ತರದ ಅರ್ಧ ಭಾಗವು ದೇವಗಿರಿ ಯಾದವರ ವಶಕ್ಕೂ ದಕ್ಷಿಣದ ಅರ್ಧ ಭಾಗವು ಹೊಯ್ಸಳ ಯಾದವರ ವಶಕ್ಕೂ ಹೋಯಿತೆಂದು ಸ್ಥೂಲಮಾನದಿಂದ ಹೇಳಬಹುದು. ಮುಂದೆ ಇವುಗಳಲ್ಲಿ ಉತ್ತರ ಭಾಗವು ಹಿಂದೂ ಜನರ ಕೈಬಿಟ್ಟು ಹೋಯಿತು. ದಕ್ಷಿಣ ಭಾಗಕ್ಕೆ ವಿಜಯನಗರದ ಅರಸರು ಒಡೆಯರಾದರು. ಇರಲಿ, ಅವರ ಇತಿಹಾಸವನ್ನು ಮುಂದೆ ಕೊಡುವೆವು. ಸದ್ಯಕ್ಕೆ ಹೇಳುವುದೇನೆಂದರೆ, ಇವೆರಡು ವಂಶಗಳೂ ಸ್ವತಂತ್ರ ರಾಜವಂಶಗಳು. ಮಿಕ್ಕವುಗಳು ಎಂದರೆ ರಟ್ಟಿ, ಶಿಲಾಹಾರ, ಕದಂಬ ಮುಂತಾದುವುಗಳು ಮಾಂಡಲಿಕ ರಾಜವಂಶಗಳೆಂಬುದನ್ನು ವಾಚಕರು ಮರೆಯಕೂಡದು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕದಂಬರಲ್ಲಿ ಎರಡು ಶಾಲೆಗಳಿದ್ದಂತೆ ಕಂಡುಬರುತ್ತದೆ. ಬನವಾಸಿ ಅಥವಾ ಹಾನಗಲ್ಲದ ಕದಂಬರ ಶಾಖೆಯೇ ಮೊದಲನೆಯದು. ಗೋವೆ ಅಥವಾ ಹಲಸಗಿಯ ಕದಂಬರ ಶಾಖೆಯೇ ಎರಡನೆಯದು. ಮೊದಲನೆಯ ಶಾಖೆಯಲ್ಲಿ ಕೀರ್ತಿವರ್ಮ, ಶಾಂತಿವರ್ಮ, ಮಲ್ಲಿಕಾರ್ಜುನ, ಕಾಮದೇವ, ಸೋಮದೇವ ಮುಂತಾದ ಮಾಂಡಲಿಕ ರಾಜರು ಪ್ರಬಲರಾಗಿದ್ದು ಅವರು ಚಾಲುಕ್ಯರಿಗೆ ಅನೇಕ ಮಹತ್ವದ ಪ್ರಸಂಗಗಳಲ್ಲಿ ಸಹಾಯ ಮಾಡಿದ್ದಾರೆ. ಎರಡನೆಯ ಶಾಖೆಯ ರಾಜಧಾನಿಯು ಕೆಲವು ಕಾಲ ಗೋವೆಯಲ್ಲಿಯೂ ಕೆಲವು ಕಾಲ ಹಲಸಗಿಯಲ್ಲಿಯೂ ಇತ್ತು. ಇವರಲ್ಲಿಯ ವಿಜಯಾದಿತ್ಯ, ಜಯಕೇಶಿ ಮುಂತಾದವರು ಚಾಲುಕ್ಯರ ಮಾಂಡಲಿಕರಾಗಿ ಹೆಸರಿಗೆ ಬಂದರು.
ಸಾರಾಂಶ:- ಈ ಪ್ರಕರಣದಲ್ಲಿ ಹೇಳಿದ ರಾಜವಂಶಗಳಲ್ಲಿ ಕಲಚೂರ್ಯ ದೇವಗಿರಿ ಯಾದವ ಮತ್ತು ಹೊಯ್ಸಳ ಯಾದವ ಈ ವಂಶಗಳು ಸ್ವತಂತ್ರವಾಗಿ ಆಳಿದ ವಂಶಗಳೆಂಬುದನ್ನೂ ಶಿಲಾಹಾರ, ರಟ್ಟ, ಕದಂಬ ಮುಂತಾದುವುಗಳು ಮಾಂಡಲಿಕ ರಾಜರ ಮನೆತನಗಳೆಂಬುದನ್ನೂ ವಾಚಕರು ನೆನಪಿನಲ್ಲಿಡಬೇಕು.