೧೩ನೆಯ ಪ್ರಕರಣ
ಕರ್ನಾಟಕದ ಕಟ್ಟಡಗಳು
“Nothing is more admirable in the great movements of India, than the consummate skill and imagination with which, in spite of the extra-ordinary wealth of detail, every part of the whole is perfectly adjusted in its place, and so balanced that aesthetical unity is always perfectly observed."
Mr. Havell
ಸಾರಾಂಶ:- ಹಿಂದೂದೇಶದ ಕಟ್ಟಡಗಳಲ್ಲಿ ವಿಶೇಷವಾಗಿ ಆಶ್ಚರ್ಯ ವಡತಕ್ಕ ಸಂಗತಿಯೇನೆಂದರೆ - ಚಿತ್ರಗಳಲ್ಲಿ ಅತಿಸೂಕ್ಷವಾದ ಕೆತ್ತಿಗೆಯ ಕೆಲಸವು ಕಂಡುಬರುತ್ತದೆ, ಆದರೆ ಈ ಕೆತ್ತಿಗೆಯ ಕೆಲಸವು ಆಯಾ ಚಿತ್ರಕ್ಕೆ ಒಪ್ಪುವಂತೆ, ಯೋಗ್ಯವಾದ ಸ್ಥಳದಲ್ಲಿಯೇ ಕೊರೆಯಲ್ಪಟ್ಟಿರುವುದರಿಂದ ಆ ಚಿತ್ರದ ಒಟ್ಟು ಸೌಂದರ್ಯಕ್ಕೆ ಅದರಿಂದ ತಿಲ ಪ್ರಾಯವೂ ಕುಂದುಂಟಾಗಿರುವುದಿಲ್ಲ. ಹೀಗೆ ಮಾಡುವುದರಲ್ಲಿ ಅವರು ತೋರಿಸಿದ ಚಾತುರ್ಯವೂ ಕಲ್ಪಕತೆಯ ಉತ್ತಮ ನಾಗಿವೆ.
ಹ್ಯಾವೆಲ್
"All architecture is but the expression of the national life and character."
Ruskin
ಶಿಲ್ಪ ಕಲೆಯೆಲ್ಲವೂ ರಾಷ್ಟ್ರೀಯ ಜೀವನದ ಮತ್ತು ರಾಷ್ಟ್ರ ಸ್ವಭಾವದ ಆದರ್ಶವೇ ಆಗಿರುತ್ತದೆ.
ರಸ್ಕಿನ್
whole world is deeply indebted. No civilization ancient or modern has produced a higher culture, no other has succeeded better in making religion the philosophy of life, and no other has contributed so much to human knowledge.
Mr. Havell
ಸಾರಾಂಶ:- ದಕ್ಷಿಣ ಹಿಂದುಸ್ಥಾನದಲ್ಲಿಯ ಪರಂಪರಾಗತವಾದ ಕೈಗಾರಿಕೆಯ ಕೆಲಸಗಳು ಉಚ್ಚ ಸುಧಾರಣೆಯ ಉತ್ತಮವಾದ ಸಾಕ್ಷಿಗಳಾಗಿವೆ. ಆ ಬಗ್ಗೆ ಇಡೀ ಜಗತ್ತೇ ಅವುಗಳಿಗೆ ಅತ್ಯಂತ ಋಣಿಯಾಗಿದೆ. ಪ್ರಾಚೀನ ಸುಧಾರಣೆಯಲ್ಲಿಯೇ ಆಗಲಿ, ಅರ್ವಾಚೀನ ಸುಧಾರಣೆಯಲ್ಲಿಯೇ ಆಗಲಿ, ಅಷ್ಟೊಂದು ಉನ್ನತವಾದ ಸಂಸ್ಕೃತಿಯನ್ನು ಬೇರಾವುದೂ ಹುಟ್ಟಿಸಿರುವುದಿಲ್ಲ; ಧರ್ಮವನ್ನು ಆಯುಷ್ಯದ ಇತಿ ಕರ್ತವ್ಯತೆಯಾಗಿ ಮಾಡುವುದರಲ್ಲಿ ಅದರಷ್ಟು ಸಿದ್ಧಿಯನ್ನು ಬೇರಾವ ಸುಧಾರಣೆಯೂ ಪಡೆದಿರುವುದಿಲ್ಲ; ಅಲ್ಲದೆ, ಮಾನವ ಜ್ಞಾನ ಭಾಂಡಾರಕ್ಕೆ ಅದರಿಂದಾದಷ್ಟು ಸಹಾಯವು ಬೇರಾವುದರಿಂದಲೂ ಆಗಿರುವುದಿಲ್ಲ.
ಹ್ಯಾವೆಲ್
ಅವಶೇಷಗಳಿಂದಲೇ ನಾವು ಆ ಸ್ಮಶಾನಭೂಮಿಯಲ್ಲಿ ಸುಟ್ಟು ಬೂದಿಯಾಗಿ ಹೋದ ಜನರ ಮೈಕಟ್ಟು ನಿಲುವಿಕೆ ಮುಂತಾದುವುಗಳ ಬಗ್ಗೆ ಕಲ್ಪನೆಗಳನ್ನು ಮಾಡುವಂತೆ, ನಾವು ನಮ್ಮ ಪೂರ್ವವೈಭವದ ಅವಶೇಷಗಳಾದ ಈ ಕಟ್ಟಡಗಳಿಂದಲೇ ನಮ್ಮ ಪೂರ್ವಜರ ಸಾಮರ್ಥ್ಯದ ಕಲ್ಪನೆಯನ್ನು ಮಾಡಬೇಕಾಗಿದೆ. ಆದುದರಿಂದ ನಮ್ಮ ಕರ್ನಾಟಕ ಶಿಲ್ಪ ಕಲೆಯ ಇತಿಹಾಸವನ್ನು ಇಲ್ಲಿ ಸಂಕ್ಷೇಪ ವಾಗಿ ವರ್ಣಿಸುವೆವು.
ಜೈನ ಮತ್ತು ಬುದ್ದರ ಕಾಲದಲ್ಲಿ ವಿಹಾರಗಳನ್ನೂ ಚೈತ್ಯಾಲಯಗಳನ್ನೂ ಕಲ್ಲುಗಳಲ್ಲಿ ಕೊರೆಯುವ ಸಂಪ್ರದಾಯವಿತ್ತು. ಈ ಕೊರೆದ ಗುಡಿಗಳು ನಮ್ಮ ದೇಶದಲ್ಲಿ ವಿಪುಲವಾಗಿರುವುವು. ಹಿಂದುಸ್ಥಾನದಲ್ಲಿರುವ ಈ ತರದ ಗುಡಿಗಳಲ್ಲಿ ಹತ್ತರಲ್ಲಿ ಒಂಬತ್ತು ಪಾಲು ಗುಡಿಗಳು ಈ ಪಶ್ಚಿಮ ಹಿಂದುಸ್ಥಾನದಲ್ಲಿಯೇ ಇರುವುವು. ಪಶ್ಚಿಮ ಘಟ್ಟದ ಮಾರ್ಗಗಳ ನೆರೆಯಲ್ಲಿಯ ಗುಡ್ಡದ ಸಾಲುಗಳಲ್ಲಿ ಇಂಥ ಗುಡಿಗಳು ನೂರಾರು ಇರುವುವು. ನಾಶಿಕ, ಕಾರ್ಲೆ, ಅಜಂತಾ, ಕಾನ್ಹೆರಿ, ಭಾಜಾ, ನಾನಘಾಟ ಕೂಡ, ಜುನ್ನರ ಮುಂತಾದ ಸ್ಥಳಗಳಲ್ಲಿ ಈ ಮಾದರಿಯ ಗುಡಿಗಳು ತುಂಬಿವೆ. ಈ ತರದ ಹಲವು ಕೊರೆದ ಗುಡಿಗಳಲ್ಲಿ ಲಿಪಿಗಳೂ ದೊರೆಯುತ್ತವೆ. ಕಾರ್ಲೆ ಮತ್ತು ನಾಸಿಕ ಗುಡಿಗಳೇ ಅತ್ಯಂತ ಪ್ರಾಚೀನವಾದುವುಗಳು.
ಇವುಗಳ ತರುವಾಯದ ಗುಡಿಗಳೆಂದರೆ, ಇದೇ ಗವಿಗಳ ಮಾದರಿಯ ಮೇಲೆ ಕಟ್ಟಿದ ಗುಡಿಗಳು. ಈ ತರದ ಗುಡಿಗಳು ಐಹೊಳೆ, ಪಟ್ಟದಕಲ್ಲು, ಬಾದಾಮಿಗಳಲ್ಲಿ ದೊರೆಯುತ್ತವೆ. ಇವು ಪೂರ್ಣ ಗುಡಿಗಳೂ ಅಲ್ಲ, ಗವಿಗಳೂ ಅಲ್ಲ.
ತುಂಗನು ಸಾರ್ವಭೌಮ ಚಕ್ರವರ್ತಿಯಾಗಿದ್ದಾಗ ಅವನ ಮಾಂಡಲಿಕ ಅರಸರಾದ ಶಿಲಾಹಾರರು ಕೊರಿಸಿದರೆಂದು ಆ ಗವಿಗಳಲ್ಲಿ ಉಲ್ಲೇಖವಿದೆ. ಅಜಂತೆಯಲ್ಲಿಯ ಗುಡಿಗಳೂ ಅವುಗಳೊಳಗಿನ ಅತ್ಯಂತ ಸುಂದರವಾದ ಚಿತ್ರಗಳೂ ಬಹುತರವಾಗಿ ಬಾದಾಮಿಯ ಚಾಲುಕ್ಯರೊಳಗೆ ಅತ್ಯಂತ ಪ್ರಸಿದ್ಧನಾದ ೨ನೆಯ ಪುಲಿಕೇಶಿಯ ಕಾಲದಲ್ಲಿ ಹುಟ್ಟಿರುತ್ತವೆ. ಆ ಅಜಂತಯೊಳಗಿನ ನಮ್ಮ ಪುಲಿಕೇಶಿಯ ರಾಜಾಸ್ಥಾನದ ಚಿತ್ರವನ್ನೇ ನಾವು ಈ ಪುಸ್ತಕದಲ್ಲಿ ಕೊಟ್ಟಿರುವೆವು.
ಬಾದಾಮಿಯ ಪ್ರಸಿದ್ಧ ವೈಷ್ಣವ ಗವಿಯನ್ನು ೨ನೆಯ ಪುಲಿಕೇಶಿಯ ಕಕ್ಕನಾದ ಮಂಗಲೀಶನೆಂಬವನು ೫೦೦ನೆಯ ಶಕದಲ್ಲಿ ಕೂರಿಸಿದನು. ಈ ಗುಡಿಯೊಳಗಿನ ಚಿತ್ರಗಳು ಬಲು ಸುಂದರವಾಗಿವೆ. ಐಹೊಳೆಯಲ್ಲಿ ಚಿಕ್ಕ ದೊಡ್ಡ ಸುಂದರವಾದ ದೇವಾಲಯಗಳು ತುಂಬಿರುತ್ತವೆ. ಇದೇ ಐಹೊಳೆಯಲ್ಲಿಯ ಒಂದು ಜೈನ ಗುಡಿಯಲ್ಲಿ ಅತ್ಯಂತ ಪ್ರಸಿದ್ದವಾದ ದೊಡ್ಡ ಶಿಲಾ ಲಿಪಿಯು ಇಂದಿಗೂ ಅಚ್ಚಳಿಯದೆ ಉಳಿದಿರುತ್ತದೆ. ಇದರಿಂದ ದೊರೆತಷ್ಟು ಐತಿಹಾಸಿಕ ಮಾಹಿತಿಯು ಮಿಕ್ಕ ಯಾವ ಶಿಲಾಲಿಪಿಯಿಂದಲೂ ದೊರೆತಿಲ್ಲ. ೨ನೆಯ ಪುಲಿಕೇಶಿಯ ಮತ್ತು ಅವನ ಪೂರ್ವಜರ ವಿಷಯಕ್ಕೆ ಆ ಲಿಪಿಯು ಮಹತ್ವದ ಸಂಗತಿಯನ್ನು ವಿವರಿಸುತ್ತದೆ. ಪಟ್ಟದಕಲ್ಲೊಳಗೆ ಒಂದೇ ಕಡೆಗೆ ಸಾಲಾಗಿ ೮-೯ ಒಂದಕ್ಕಿಂತ ಒಂದು ಸುಂದರವಾದ ದೇವಾಲಯಗಳು ನೋಡತಕ್ಕವಾಗಿವೆ, ಅವುಗಳಲ್ಲೆಲ್ಲಾ ವಿರೂಪಾಕ್ಷ ದೇವಾಲಯವು ದೊಡ್ಡದು. ಇದನ್ನು ೨ನೆಯ ಪುಲಿಕೇಶಿಯ ವಂಶಜನಾದ ವಿಕ್ರಮಾದಿತ್ಯನೆಂಬವನ ಹೆಂಡತಿಯಾದ ಲೋಕಮಹಾದೇವಿಯು ೬೫೬ ನೆಯ ಶಕದಲ್ಲಿ ತನ್ನ ಗಂಡನು ಪಲ್ಲವರನ್ನು ಸೋಲಿಸಿದ್ದರ ಸೂಚನಾರ್ಥವಾಗಿ ಕಟ್ಟಿಸಿದಳು. ಈ ದೇವಾಲಯಗಳಲ್ಲದೆ, ಇಟಗಿ, ಲಕ್ಕುಂಡಿ, ಲಕ್ಷೇಶ್ವರ, ಹಾನಗಲ್ಲ, ಕುಕನೂರ ಮುಂತಾದ ಅನೇಕ ಸ್ಥಳಗಳಲ್ಲಿಯ ದೇವಾಲಯಗಳು ನೋಡತಕ್ಕವಾಗಿವೆ. ಈ ತರದ ಗುಡಿಗಳಿಗೆ ಚಾಲುಕ್ಯ ಪದ್ದತಿಯ ಕಟ್ಟಡಗಳೆಂದು ಕರೆಯುವ ವಾಡಿಕೆಯುಂಟು. ಈ ಪದ್ಧತಿಯ ಗುಡಿಗಳ ವಿಷಯವಾಗಿ ಪ್ರಸಿದ್ಧ ಶಿಲ್ಪಶಾಸ್ತ್ರಜ್ಞ ನಾದ ಡಾ| ಫರ್ಗ್ಯುಸನ್ ಎಂಬವನು ಹೇಳುವುದೇನೆಂದರೆ-
place in the west- eastwards its southern limit was the Tungabhadra and Krishna rivers; and on the North it perhaps extended to a line drawn from the South end of the Chilka lake towards Nagpur, and thence Westwards and Southwards to the coast.
The Dharwar District may be regarded as the Cradic of the style.
ಸಾರಾಂಶ:– ಈ ಚಾಲುಕ್ಯ ಪದ್ದತಿಯ ಗುಡಿಗಳು ಅವುಗಳ ಉಗಮ ಸ್ಥಾನವಾದ ಮೈಸೂರ ಪ್ರಾಂತದಲ್ಲಿಯೂ ಮಿಕ್ಕ ಕರ್ನಾಟಕದಲ್ಲಿಯೂ ವಿಶೇಷ ವಾಗಿ ಕಂಡುಬರುತ್ತವೆ. ಪೂರ್ವ ದಿಕ್ಕಿಗೆ ತುಂಗಭದ್ರಾ ಮತ್ತು ಕೃಷ್ಣಾ ನದಿಗಳೇ ಅವುಗಳ ದಕ್ಷಿಣಗಡಿಯು, ಚಿಲ್ಕಾ ಸರೋವರದ ದಕ್ಷಿಣ ತುದಿಯಿಂದ ಮೇಲೆ ಉತ್ತರಕ್ಕೆ ನಾಗಪುರದವರೆಗೂ ಅಲ್ಲಿಂದ ಪಶ್ಚಿಮಕ್ಕೂ ದಕ್ಷಿಣಕ್ಕೂ ಸಮುದ್ರ ತೀರದವರೆಗೂ ಈ ಗುಡಿಗಳು ತುಂಬಿರುತ್ತವೆ.
ಧಾರವಾಡ ಜಿಲ್ಲೆಯಂತೂ ಇಂಥ ಗುಡಿಗಳ ಹುಟ್ಟು ಭೂಮಿಯೇ ಆಗಿದೆ.
ಕರ್ನಾಟಕ ರಾಜರು ಆಳಿದ ಪ್ರದೇಶವೆಲ್ಲವೂ ಈ ಚಾಲುಕ್ಯ ಪದ್ಧತಿಯ ಗುಡಿಗಳಿಂದ ತುಂಬಿದೆ. ಆದುದರಿಂದ ಕರ್ನಾಟಕವು ಇಂಥ ಗುಡಿಗಳ ಆಗರವೆಂದೂ ಧಾರವಾಡ ಜಿಲ್ಲೆಯು ತವರುಮನೆಯೆಂದೂ ಹೇಳಬಹುದು. ಈ ಪದ್ದತಿಗೆ ಚಾಲುಕ್ಯ ಪದ್ಧತಿಯನ್ನಬೇಕೋ ಬೇಡವೋ ಎಂಬ ವಾದದಲ್ಲಿ, ನಾವು ಪ್ರವರ್ತಿಸುವುದಿಲ್ಲ. ಚಾಲುಕ್ಯರೂ ರಾಷ್ಟ್ರಕೂಟದವರೂ ಹೊಸ ಚಾಲುಕ್ಯರೂ ಹೊಯ್ಸಳರೂ ಕರ್ನಾಟಕರೇ ಆಗಿರುವುದರಿಂದ ಅವರು ಕಟ್ಟಿದ ಗುಡಿಗಳ ಪದ್ದತಿಗೆ ಇತಿಹಾಸದೃಷ್ಟಿಯಿಂದ ಕರ್ನಾಟಕ ಪದ್ದತಿಯೆಂದೇ ಕರೆಯಬಹುದು.
ಈ ನಮ್ಮ ಕಟ್ಟಡಗಳಲ್ಲಿ ಅತ್ಯಂತ ಪ್ರಸಿದ್ದವಾದ ಕೆಲವು ದೇವಾಲಯಗಳ ವರ್ಣನೆಯನ್ನು ನಾವು ಇದರಡಿ ಕೊಡುತ್ತೇವೆ.
ಯೊಳಗೆ 'ಕನ್ನಡ' ವೆಂಬ ತಾಲುಕಿನಲ್ಲಿ ವೇರೂಳವೆಂಬ ಗ್ರಾಮದೊಳಗಿನ ಕೈಲಾಸವೆಂಬ ದೇವಾಲಯವು, ಒಂದು ದೊಡ್ಡ ಗುಡ್ಡವನ್ನೇ ಪೂರ್ಣವಾಗಿ ಕೊರೆದು ವಿಸ್ತೀರ್ಣವಾಗಿರುವ ಈ ಅಖಂಡವಾದ ಸುಂದರ ದೇವಾಲಯವನ್ನು ನಿರ್ಮಿಸಿರುತ್ತಾರೆ. ದೂರದಿಂದ ನೋಡಿದರೆ ಕಟ್ಟಿಸಿದ ಗುಡಿಯೆಂದೇ ಭಾಸವಾಗುತ್ತದೆ. ವೇರೂಳ ಗುಡ್ಡದಲ್ಲಿ ಸಾಲಾಗಿ ಸುಮಾರು ೩೪ ದೊಡ್ಡ ದೊಡ್ಡ ಕೊರೆದ ಗುಡಿಗಳುಂಟು, ಇಷ್ಟು ವಿಸ್ತೀರ್ಣವಾದ ಸಭಾಮಂಟಪಗಳನ್ನು ಕರ್ನಾಟಕದ ಶಿಲ್ಪಿಗರು ಹೇಗೆ ಕಡಿದರೆಂಬುದೇ ಅತ್ಯಂತ ಆಶ್ಚರ್ಯಜನಕವಾದ ಸಂಗತಿಯಾಗಿದೆ. ಕೊರೆದು ತೆಗೆದ ಒಳಗಿನ ಕಲ್ಲುಬಂಡೆಗಳು ಒಂದು ದೊಡ್ಡ ಗುಡ್ಡವೇ ಆಗಬಹುದು. ಅದೆಲ್ಲವನ್ನೂ ಹೇಗೆ ತೆಗೆದರೋ, ಅದು ಈಗ ಎಲ್ಲಿವೆಯೋ ಮುಂತಾದ ಸಂಗತಿಗಳು ಊಹಿಸಲಶಕ್ಯವಾಗಿವೆ. ಈ ೩೪ ಗುಡಿಗಳಲ್ಲಿ ಕೈಲಾಸಗುಡಿಯೇ ಅತ್ಯಂತ ಸುಂದರವಾದದ್ದೂ ಭವ್ಯವಾದದ್ದೂ ಆಗಿದೆ. ಇದನ್ನು ನಮ್ಮ ರಾಷ್ಟ್ರಕೂಟ ಅರಸನಾದ ಕೃಷ್ಣ (೭೫೩-೭೭೫) ನೆಂಬವನು ಕೂರಿಸಿದನು. ಬಡೋದೆಯಲ್ಲಿ ಸಿಕ್ಕಿದ ತಾಮ್ರ ಪಟಗಳಲ್ಲಿ ಈ ಗುಡಿಯ ವರ್ಣನೆಯು ದೊರೆಯುತ್ತದೆ. "ಈ ಗುಡಿಯು 'ಸ್ವಯಂಭೂ' ಗುಡಿಯೇ ಸರಿ; ಇದು ಮನುಷ್ಯ ಕೃತಿಯಾಗಿರಲಾರದು, ಮಾನವರಿಗೆ ಇಂಥ ಅದ್ಭುತ ಗುಡಿಯನ್ನು ಮಾಡುವ ಶಕ್ತಿಯೆಲ್ಲಿ ?” ಎಂದು ಅಲ್ಲಿ ವರ್ಣನೆಯುಂಟು. ವಿಶ್ವಕರ್ಮನೆಂಬ ಶಿಲ್ಪಿಗನು ಇದನ್ನು ಕೊರೆದನಂತೆ. ಈ ಗುಡಿಯನ್ನು ಕೊರೆದ ಮೇಲೆ ಅವನಿಗೆ ಅತ್ಯಂತ ಆನಂದವಾಗಿ ಇಂಥ ಗುಡಿಯನ್ನು ತಾನು ಹೇಗೆ ರಚಿಸಿದನೆಂಬುದು ತನಗೇ ತಿಳಿಯದಷ್ಟು ಆಶ್ಚರ್ಯವಾಯಿತಂತೆ!
ಪ್ರತಿಕ್ಷಣಕ್ಕೆ ಬೆಳೆಯುತ್ತ ಹೋಗುತ್ತವೆ. ಈ ದೇವಾಲಯದಲ್ಲಿ ಒಳಗಡೆ ಮೇಲ್ಬದಿಯಲ್ಲಿ ಅಲ್ಲಲ್ಲಿಗೆ ಸುಂದರವಾದ ಬಣ್ಣವು ಇಂದಿಗೂ ಅಚ್ಚಳಿಯದೆ ಉಳಿದಿರುತ್ತದೆ!ಈ ಗುಡಿಯು ಹುಟ್ಟಿ ಈಗ ಸುಮಾರು ೧೨೦೦ ವರ್ಷಗಳಾದುವು. ಎಂದ ಮೇಲೆ ಅಷ್ಟು ಹಿಂದಿನ ಬಣ್ಣವನ್ನು ನೋಡಿ ಕರ್ನಾಟಕರಿಗೆ ಆನಂದವಾಗಲಿಕ್ಕಿಲ್ಲವೋ ? ಮನೆಯಲ್ಲಿ ಕುಳಿತು ನೀವು ಎಷ್ಟೇ ಅದ್ಭುತ ದೇವಾಲಯವನ್ನು ಹುಟ್ಟಿಸಬೇಕೆಂದು ಮನಸ್ಸಿನಲ್ಲಿ ಮಂಡಿಗೆ ಮಾಡಿದರೂ, ಇಂಥ ಅದ್ಭುತ ಮಂಡಿಗೆಯನ್ನು ಮಾಡಲಾರಿರಿ. ಒಬ್ಬ ಗಣಿತಜ್ಞನು ಈ ಕೈಲಾಸ ಮತ್ತು ಅದರ ಹತ್ತರಿರುವ ಗುಡಿಗಳನ್ನು ನೋಡಿ ಲೆಕ್ಕ ಹಾಕಿ, ಈ ಗುಡಿಗಳನ್ನು ಕೊರೆಯಲಿಕ್ಕೆ ೪೮ ಲಕ್ಷ ಜನರು ಒಂದೇ ಸಮನಾಗಿ ೨೧ ವರುಷಗಳ ವರೆಗೆ ಕೆಲಸ ಮಾಡಬೇಕಾದೀತು ಎಂದೆನ್ನುತ್ತಾನೆ! ಇರಲಿ.
ಕೃಷ್ಣರಾಜನು ಸ್ವತಃ ತಾನೇ ಅಲ್ಲಿಯ ಲಿಂಗವನ್ನು ಮಾಣಿಕ-ರತ್ನ ಮುಂತಾದ ಅಸಂಖ್ಯಾತವಾದ ಆಭರಣಗಳಿಂದ ಅಲಂಕರಿಸಿದನಂತೆ, ಸಾರಾಂಶ:- ಈ ಗುಡಿಯ ವರ್ಣನೆಯನ್ನು ಬಾಯಿಯಿಂದ ಹೇಳುವುದು ಅಥವಾ ಲೆಕ್ಕಣಿಕೆಯಿಂದ ವರ್ಣಿಸುವುದು ಶಕ್ಯವಿಲ್ಲ, ಅದನ್ನು ಕಣ್ಣಿನಿಂದ ನೋಡಬೇಕು. ಎಷ್ಟು ನೋಡಿದರೂ ಕಣ್ಣುಗಳಿಗೆ ತೃಪ್ತಿಯಾಗುವುದಿಲ್ಲ ! ಇದೇ ಗುಡಿಯನ್ನು ನೋಡಲಿಕ್ಕೆ ಹೋದಾಗ, ಈ ಗುಡಿಗಳ ಸಾಲಿನಲ್ಲಿರುವ ಒಂದು ಗುಡಿಯಲ್ಲಿ ನನ್ನ ಕಣ್ಣಿಗೆ ಕನ್ನಡ ಶಿಲಾಲೇಖವೊಂದು ದೃಷ್ಟಿಗೆ ಬಿದ್ದಿರುವ ಸಂಗತಿಯನ್ನು ಹಿಂದ ಉಲ್ಲೇಖಿಸಿದ್ದೇವೆ. ಕನ್ನಡಿಗರೇ, ಈ ಕೈಲಾಸವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಾರದೇ?
ಅದೇ ಮೇರೆಗೆ ಅಜ೦ತೆಯಲ್ಲಿಯ ಗುಡಿಗಳೂ ನೋಡತಕ್ಕವಾಗಿವೆ. ಆದರೆ ನಾವು ಇನ್ನೂ ಅವುಗಳನ್ನು ನೋಡಿಲ್ಲ. ಆದುದರಿಂದ ಆ ವಿಷಯಕ್ಕೆ ಹೆಚ್ಚಿಗೆ ಹೇಳುವುದಿಲ್ಲ. ಈ ವಿಷಯವಾಗಿ ಹೇಳಿರುವುದೇನೆಂದರೆ -
"ಆ ಕೊರೆದ ಗವಿಗಳಲ್ಲಿಯ ಶಿಲ್ಪದಲ್ಲಿ, ಐದನೆಯ ಶತಮಾನದಿಂದ ಎಂಟನೆಯ ಶತಮಾನದವರೆಗೆ ಶಿಲ್ಪ ಕಲೆಯು ಹೇಗೆ ಅಭಿವೃದ್ದಿಯನ್ನು ಹೊಂದಿ ತಂಬುದು ಚೆನ್ನಾಗಿ ಗೊತ್ತಾಗುತ್ತದೆ."
೨ನೆಯ ಪುಲಿಕೇಶಿಯ ಚಿತ್ರವು ದೊರೆತುದು ಇದೇ ಗುಡಿಗಳಲ್ಲಿಯೇ.
ಇನ್ನು, ಪಶ್ಚಿಮ ಚಾಲುಕ್ಯರ ಕಾಲಕ್ಕೆ ಕಟ್ಟಲ್ಪಟ್ಟ ಒಂದು ಗುಡಿಯನ್ನು ವರ್ಣಿಸುವೆವು. ಚಾಲುಕ್ಯ ವಿಕ್ರಮನ ಕಾಲಕ್ಕೆ ಇಟಗಿಯಲ್ಲಿ, ಅವನ ಮಹಾ ಪ್ರಧಾನ ದಂಡನಾಯಕನೂ "ಕನ್ನಡ ಸಂಧಿವಿಗ್ರಹಿ”ಯೂ ಆದ ಮಹಾದೇವನೆಂಬವನು ಸುಂದರವಾದ ಮಹಾದೇವರ ಗುಡಿಯೊಂದನ್ನು ಕಟ್ಟಿಸಿ, ಇಟಗಿಯೊಳಗಿನ ನಾನೂರು ಮಹಾಜನರಿಗೆ ಭೂಮಿಗಳನ್ನು ದಾನವಾಗಿ ಕೊಟ್ಟನು. ಈ ಗುಡಿಯಲ್ಲಿಯ ಶಿಲಾಲೇಖದಲ್ಲಿ ಈ ಗುಡಿಗೆ - 'ದೇವಾಲಯ ಚಕ್ರವರ್ತಿ' ಎಂದು ಹೆಸರಿದ, ಈ ಗುಡಿಯ ವಿಷಯದಲ್ಲಿ ಫರ್ಗ್ಯುಸನ್ನನು ಹೇಳಿರುವುದೇನೆಂದರೆ-
"must be regarded as one of the most highly finished and architecturally perfect of the Chalukyan shrines, that have come down to us. In the opinion of the late Meadow's Taylor the carving of the some of the pillars and of the lintels and architraves of the doors is quite beyond description. No chased work in silver and gold could possibly be finer.”
ಸಾರಾಂಶ:- ಸಂಪೂರ್ಣವಾಗಿಯೂ ಶಿಲ್ಪಶಾಸ್ತ್ರದೃಷ್ಟಿಯಿಂದ ಅತ್ಯಂತ ಸುಂದರವಾಗಿಯ ಕಟ್ಟಲ್ಪಟ್ಟ ಚಾಲುಕ್ಯ ಪದ್ದತಿಯ ಗುಡಿಗಳಲ್ಲಿ ಇದನ್ನು ಗಣನೆ ಮಾಡಬೇಕು. ಕೆಲವು ಕಂಬಗಳ ಛಾವಣಿಗಳ ಮತ್ತು ಬೋದುಗೆಗಳ ಕೆತ್ತಿಗೆಯಂತೂ ಮಿ| ಮಿಡೋ ಟೇಲರ್ ಇವರು ಹೇಳುವಂತೆ ವರ್ಣಿಸಲಳವಲ್ಲದಷ್ಟು ಅಪ್ರತಿಮವಾಗಿದೆ. ಬೆಳ್ಳಿಬಂಗಾರಗಳಲ್ಲಿ ಕೂಡ ಅಷ್ಟು ಸುಂದರವಾದ ಕೆತ್ತಿಗೆಯನ್ನು ಮಾಡುವುದು ಅಸಾಧ್ಯವು.
ಬಂಗಾರಗಳಲ್ಲಿ ಕೂಡ ಇಷ್ಟು ಕುಸುರಿನ ಕೆಲಸವನ್ನು ಕೆತ್ತುವುದು ಅಶಕ್ಯವೆಂದೂ ವರ್ಣಿಸಿರುವಂಥ ಗುಡಿಯನ್ನು ನಮ್ಮ ಕರ್ನಾಟಕಸ್ಥನೊಬ್ಬನು ಕಟ್ಟಿಸಿರಲು ಅದರ ಅಭಿಮಾನವು ನಮಗೆ ಏನೂ ಇರಬೇಡವೆ?
ಪೂರ್ವಚಾಲುಕ್ಯರು ಪ್ರಾರಂಭಿಸಿದ ಶಿಲ್ಪಶಾಸ್ತ್ರವು ಹೊಯ್ಸಳ ಬಲ್ಲಾಳರ ಕಾಲಕ್ಕೆ ಪರಿಣತಿಯನ್ನು ಹೊಂದಿತೆಂದು ಹೇಳಬಹುದು. ಹಳೇಬೀಡು ಅಥವಾ ದ್ವಾರಸಮುದ್ರ ಮತ್ತು ಬೇಲೂರಿನಲ್ಲಿಯ ದೇವಾಲಯಗಳೆಂದರೆ ಇಡೀ ಹಿಂದುಸ್ಥಾನದಲ್ಲಿ ಇರುವ ಯಾವತ್ತು ಗುಡಿಗಳಲ್ಲಿ ಅತ್ಯಂತ ಸುಂದರವಾದವುಗಳೆಂದು ಹೇಳಬಹುದು, – ಅಷ್ಟೇಕೆ? ಪೃಥ್ವಿಯಲ್ಲಿಯ ಅತ್ಯಂತ ಸುಂದರವಾದ ಗುಡಿಗಳಲ್ಲಿಯೇ ಇವು ಎಣಿಸಲ್ಪಟ್ಟಿವೆ. ಡಾ| ಫರ್ಗ್ಯುಸನ್ನನು ಇವುಗಳ ವಿಷಯವಾಗಿ ಬರೆದಿರುವುದೇನೆಂದರೆ -
"There are many buildings in India, which are unsurpassed for delicacy of detail, by any in the world; but the temples at Belur and Halebid surpass even these, for freedom of handling and richness of fancy. The amount of labour which each facet, of this porch (Belur) display is such as I believe never was bestowed on any surface of equal extent in any building in the world."
ಇದರ ಸಾರಾಂಶವೇನೆಂದರೆ- ಹಿಂದುಸ್ಥಾನದಲ್ಲಿ, ಸೃಷ್ಟಿಯಲ್ಲಿಯ ಮಿಕ್ಕ ಗುಡಿಗಳನ್ನು ಅತ್ಯಂತ ಸೂಕ್ಷವಾದ ಕೆಲಸದಲ್ಲಿ ಮೀರಿಸುವಂಥ ಅನೇಕ ಗುಡಿಗಳುಂಟು. ಅವುಗಳಲ್ಲಿಯೂ ಬೇಲೂರ ಮತ್ತು ಹಳೇಬೀಡುಗಳಲ್ಲಿಯ ಗುಡಿಗಳೇ ಶ್ರೇಷ್ಠವಾದುವುಗಳು. ಇಷ್ಟು ಕುಸುರಿನ ಕೆಲಸವು ಸೃಷ್ಟಿಯಲ್ಲಿಯ ಮಿಕ್ಕ ಯಾವ ಗುಡಿಯಲ್ಲಿಯೂ ಕಂಡುಬರುವುದಿಲ್ಲ. ಹಳೇಬೀಡಿನ ಗುಡಿಯ ವಿಷಯವಾಗಿ ಅವನು ಹೇಳಿರುವುದೇನೆಂದರೆ-
the temples are the same; every convolution of every scroll is different. No two canopies in the whole building are alike; and every part exhibits joyous exuberance of fancy scorning every mechanical restraint.”
ಸಾರಾಂಶ:- ಮಾನವಕ್ರತಿಗಳಲ್ಲಿ ಇದೊಂದು ಆಶ್ಚರ್ಯಜನಕವಾದ ಕೃತಿಯೆಂದೇ ಹೇಳಬಹುದು. ಗುಡಿಗಳಲ್ಲಿ, ಒಂದು ಚಿತ್ರದ ಮೇಲ್ಮೈಯಂತೆ, ಮತ್ತೊಂದು ಚಿತ್ರದ ಮೇಲ್ಮೈಯಿರುವುದಿಲ್ಲ; ಪ್ರತಿಯೊಂದು ಸುಳುವಿನ ತಿರಸುಗಳು ಬೇರೆ ಬೇರೆ ಇರುತ್ತವೆ; ಒಂದರಂತೆ ಒಂದು ಗುಮಟವಿಲ್ಲ; ಕೈವಾಡದವರು ಪ್ರತಿಯೊಂದು ಕಡೆಗೂ ಕೈ ಬಿಗಿಹಿಡಿಯದೆ ಕೆಲಸಮಾಡಿರುವುದರಿಂದ ಎಲ್ಲಿ ನೋಡಿದರೂ ಸುಂದರವಾದ ಶಿಲ್ಪ ಕಲೆಯ ಸುಗ್ಗಿಯೇ ದೃಷ್ಟಿಗೋಚರವಾಗುತ್ತದೆ.” ಎಂದು ಮುಂತಾಗಿ ಮಾಡಿದ ವರ್ಣನೆಯನ್ನು ಕನ್ನಡಿಗರು ಮರೆಯುವುದು ಹೇಗೆ ?
ಹಳೇಬೀಡಿನ ಹೊಯ್ಸಳೇಶ್ವರನ ಮತ್ತು ಕೇದಾರೇಶ್ವರನ ಗುಡಿಗಳ ವಿಷಯವಾಗಿ ಅವನು ಮತ್ತೂ ಬರೆದಿರುವುದೇನೆಂದರೆ-
The great temple, had it been completed, is one of the buildings on which the advocate of Hindu architecture would desire to take his stand...and if carried out with the richness of detail exhibited in the Kedareshwar, would have made up a whole, which it would be difficult to rival any where. The Kedareshwar temple is "one of the most exquisite specimens of Chalukyan architecture in existence, and one of the most typical.”
ಅತ್ಯಂತ ಸೂಕ್ಷವಾದ ಕೆಲಸವು ಮಾಡಲ್ಪಟ್ಟಿದ್ದರಂತೂ ಈ ಗುಡಿಯಂಥ ಸುಂದರವಾದ ಮತ್ತೊಂದು ಗುಡಿಯನ್ನು ಜಗತ್ತಿನಲ್ಲಿ ಕಾಣುವುದೇ ದುರ್ಲಭವಾಗುತ್ತಿತ್ತು. ಕೇದಾರೇಶ್ವರ ಗುಡಿಯು ಚಾಲುಕ್ಯ ಪದ್ಧತಿಯ ಗುಡಿಗಳಲ್ಲಿ ಅತ್ಯಂತ ಸುಂದರವಾದುದೆಂದು ಆಗಿರುತ್ತದೆ.
ಹೊಯ್ಸಳೇಶ್ವರ ಗುಡಿಯನ್ನು ಕಟ್ಟುವ ಕೆಲಸವು ೮೬ ವರ್ಷಗಳವರೆಗೆ ಒಂದೇ ಸಮವಾಗಿ ನಡೆದಿತ್ತಂತೆ! ಆದರೂ ಅದು ಮುಗಿದಿರುವುದಿಲ್ಲ. ಈ ಗುಡಿಯು ಮುಗಿದಿದ್ದರೆ, ಇಂಥ ಗುಡಿಯು ಜಗತ್ತಿನಲ್ಲಿ ಮತ್ತೊಂದು ಇರುತ್ತಿರಲಿಲ್ಲವೆಂದು ನಿರ್ವಿವಾದವಾಗಿ ಹೇಳಬಹುದಾಗಿತ್ತು. ಕರ್ನಾಟಕರೆ! ಈ ನಿಮ್ಮ ಪೂರ್ವಜರ ವೈಭವವನ್ನು ಕೇಳಿ ನಿಮಗೆ ಆನಂದವುಂಟಾಗದೊ? ಇಂಥ ಮಹತ್ಕೃತ್ಯಳು ಶಾಂತತೆಯಿಲ್ಲದೆ ಜರಗುವವೇನು? ಆದರೂ ಬ್ರಿಟಿಶ ರಾಜರು ಬರುವ ಮೊದಲು ದೇಶದಲ್ಲಿ ಶಾಂತತೆಯಿರಲಿಲ್ಲ, ಎಲ್ಲಿ ನೋಡಿದರೂ ಅರಾಜಕತೆಯಿತ್ತೆಂದು ನಮಗೆ ಆಗದವರು ಹೇಳುತ್ತಾರೆ, ನಾವು ಬಾಯಿ ಮುಚ್ಚಿಕೊಂಡು ಕೇಳುತ್ತೇವೆ; ಇಂಥ ದುರ್ಬಲತನಕ್ಕೇ್ಕೆನನ್ನ ಬೇಕು?
ಈ ಬಗೆಯಾಗಿ, ಹಳೆಯ ಚಾಲುಕ್ಯ, ರಾಷ್ಟ್ರಕೂಟ, ಹೊಸ ಚಾಲುಕ್ಯ ಹೊಯ್ಸಳ ಮುಂತಾದ ಅರಸರ ಕಾಲದ ಒಂದೊಂದೇ ವರ್ಣನೆಯನ್ನು ಕೊಟ್ಟಿದ್ದಾಯಿತು. ಇನ್ನು ಕೊನೆಯ ವಂಶವಾದ ವಿಜಯನಗರದ ಕಾಲದಲ್ಲಿಯ ಕಟ್ಟಡವೊಂದನ್ನು ಕುರಿತು ತುಸ ಹೇಳಿ ಈ ಬೆಳೆದ ಪ್ರಕರಣವನ್ನು ಮುಗಿಸುವೆವು.
ವರು ಇದನ್ನು ವರ್ಣಿಸಿರುವುದೇನೆಂದರೆ – “It shows the extreme limit in florid magnificence to which the style advanced. The building is wholly in granite and carved with a boldness and expression of power nowhere surpassed in the buildings of its class.
ಸಾರಾಂಶ:- ಈ ತರದ ಕಟ್ಟಿನ ಗುಡಿಗಳಲ್ಲಿ ಹೂಬಳ್ಳಿಗಳ ಸುಳುವುಗಳನ್ನು ಕೆತ್ತುವ ಕೆಲಸವು ಎಷ್ಟು ಪರಿಣತಾವಸ್ಥೆಯನ್ನು ಹೊಂದಿತ್ತೆಂಬುದಕ್ಕೆ ಈ ಗುಡಿಯು ಉತ್ಕೃಷ್ಟವಾದ ಉದಾಹರಣೆಯಾಗಿದೆ. ಗುಡಿಯು ಅಚ್ಚ ಕರೆಕಲ್ಲಿನದು. ಈ ತರದ ಗುಡಿಗಳಲ್ಲಿ, ಇಷ್ಟು ಗಂಭೀರವಾಗಿ ಎದ್ದು ಕಾಣಿಸುವ ಗುಡಿಯು ಬೇರೆಲ್ಲಿಯೂ ಕಾಣಬರುವುದಿಲ್ಲ.
ಈ ಮೇಲೆ ವರ್ಣಿಸಿದ ಗುಡಿಗಳಲ್ಲದೆ ಕರ್ನಾಟಕ ರಾಜರೂ ಮತ್ತು ಧನವಂತರೂ ಕಟ್ಟಿಸಿದ ಎಷ್ಟೋ ಗುಡಿಗಳು ನೋಡತಕ್ಕವಾಗಿವೆ. ಕಾರ್ಲೆ, ಕಾನ್ಹೇರಿ, ಲಕ್ಕುಂಡಿ, ಐಹೊಳೆ, ಪಟ್ಟದಕಲ್ಲು ಮುಂತಾದ ಸ್ಥಳಗಳನ್ನು ಕರ್ನಾಟಕಸ್ಥರು ನೋಡಿ ಆನಂದಪಡಬೇಕು. ನಾವು ಮೇಲೆ ವರ್ಣಿಸಿದ ಗುಡಿಗಳನ್ನು ನೋಡದಿದ್ದರೆ - 'ಕರ್ನಾಟಕ'ರೆಂಬ ನಾಮವನ್ನು ಧರಿಸುವುದಕ್ಕೂ ನಾವು ಅರ್ಹರಿರುವುದಿಲ್ಲ. ಆ ಪ್ರತಿಯೊಂದು ಗುಡಿಗೂ, ಆ ಪದ್ಧತಿಯಿಂದ ಕಟ್ಟಿದ ಗುಡಿಗಳಲ್ಲಿ ಎಲ್ಲಕ್ಕೂ ಶ್ರೇಷ್ಟವೆಂದೇ ತಜ್ಞರು ಮಾನ್ಯತಾ ಪತ್ರವನ್ನು ಕೊಟ್ಟಿರುವರು. ಮತ್ತು ತಮ್ಮ ಲೆಕ್ಕಣಿಕೆಯಲ್ಲಿದ್ದಷ್ಟು ಸಾಮರ್ಥ್ಯದಿಂದ ಅದನ್ನು ವರ್ಣಿಸಿರುವರು.
ವಾಚಕರೇ, ನಮ್ಮ ಕರ್ನಾಟಕದ ಶಿಲ್ಪಶಾಸ್ತ್ರವು ಎಷ್ಟು ಪರಿಣತಾವಸ್ಥೆಗೆ ಮುಟ್ಟಿತ್ತೆಂಬುದಕ್ಕೆ ಇಷ್ಟು ವರ್ಣನೆಯು ಸಾಲದೇ?
ಇನ್ನು ಕೊನೆಗೆ ಶಿಲ್ಪಶಾಸ್ವಾಚಾರ್ಯರಾದ ಜಕಣಾಚಾರ್ಯರ ಕಥೆಯನ್ನು ಹೇಳಿ ಈ ಬೆಳೆದ ಪ್ರಕರಣವನ್ನು ಮುಗಿಸುವೆವು.
ಮನೆಬಿಟ್ಟು ಹೊರಟರು. ಅವರು ಶಿಲ್ಪಕಲಾ ಪ್ರವೀಣರಾಗಿದ್ದದರಿಂದ, ಹೋದ ಹೋದಲ್ಲಿ ಗುಡಿಗಳನ್ನು ಕಟ್ಟುತ್ತ ಕೊನೆಗೆ ಬೇಲೂರಿಗೆ ಬರಲು, ಅಲ್ಲಿಯ ಅರಸನಾದ ವಿಷ್ಣುವರ್ಧನನು ಅವರಿಂದ ಚೆನ್ನಕೇಶವನ ದೇವಾಲಯವೊಂದನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಚೆನ್ನಕೇಶವನ ಸುಂದರವಾದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಬೇಕೆನ್ನುವಷ್ಟರಲ್ಲಿ, ಹದಿನಾರು ವರುಷದ ಹುಡುಗನೊಬ್ಬನು ಆ ಉತ್ಸವಕ್ಕೆ ಬಂದು, ಆ ಚೆನ್ನಕೇಶವ ಮೂರ್ತಿಯು ಅಶುದ್ಧವಾದ ಕಲ್ಲಿನಿಂದ ಮಾಡಲ್ಪಟ್ಟಿರುವುದೆಂದೂ ಅದು ಪ್ರಾಣ ಪ್ರತಿಷ್ಠಾಪನೆಗೆ ಯೋಗ್ಯವಿಲ್ಲವೆಂದೂ ಪ್ರತಿಪಾದಿಸಿದನು. ಆಗ ಅವರಿಬ್ಬರಲ್ಲಿ ವಾದ ನಡೆಯಿತು. ಅದು ಅಶುದ್ಧ ಎಂದು ತೋರಿಸಿಕೊಟ್ಟರೆ ತಮ್ಮ ಬಲಗೈಯನ್ನೇ ಕಡಿದು ಕೊಂಡುಬಿಡುವೆನೆಂದು ಜಕಣಾಚಾರ್ಯರು ಹೇಳಿದರು. ಆಗ ಆ ಹುಡುಗನು ಆ ಮೂರ್ತಿಯ ನಾಭಿಕಮಲದ ಹತ್ತರ ತುಸು ಮಳಲೂ ನೀರೂ ಒಂದು ಕಪ್ಪೆಯೂ ಇರುವುವೆಂದೂ, ಆದಕಾರಣ ಅದು ಅಶುದ್ಧವೆಂದೂ ಆ ಮೂರ್ತಿಯನ್ನು ಒಡೆದು ಪರೀಕ್ಷಿಸಬಹುದೆಂದೂ ಹೇಳಿದನು. ಆ ಹುಡುಗನ ಮಾತನ್ನು ನಂಬಿ, ಆ ಸುಂದರವಾದ ಮೂರ್ತಿಯನ್ನು ಒಡೆಯುವುದು ಹೇಗೆ ? ಆದುದರಿಂದ ಅವನ ಮಾತನ್ನು ಯಾರೂ ಆಲಿಸಲಿಲ್ಲ. ಆ ಮೂರ್ತಿಯಲ್ಲಿ, ಅವನು ತಾನು ಹೇಳುವಂತೆ ನೀರು ಮುಂತಾದುವು ಇರುವುವೆಂಬ ಬಗ್ಗೆ ತಮಗೆ ವಿಶ್ವಾಸ ಹುಟ್ಟಿಸಿದರೆ ಮಾತ್ರ, ತಾವು ಅದನ್ನು ಒಡೆಯ ಬಹುದೆಂದು ಜನರು ಆ ಹುಡುಗನಿಗೆ ಹೇಳಿದರು. ಆಗ ಆ ಬಾಲಕನು, ತುಸು ವಿಚಾರಮಾಡಿ “ನೀವು ಈ ಮೂರ್ತಿಯ ಶರೀರಕ್ಕೆಲ್ಲ ಗಂಧವನ್ನು ತೊಡೆದು ನೋಡಿರಿ, ಅಂದರೆ ನಾಭಿಕಮಲದ ಹತ್ತಿರ ಒಳಗೆ ನೀರಿರುವುದರಿಂದ ಗಂಧವು ಹಸಿಯುಳಿದು ಮಿಕ್ಕ ಕಡೆಗೆ ಒಣಗುವುದು. ಅಲ್ಲಿ ನೀರಿರುವುದಕ್ಕೆ ಅದೇ ಗುರುತು” ಎಂದು ಉತ್ತರವನ್ನಿತ್ತನು. ಆ ನೆರೆದ ಜನರಿಗೆ ಆ ಮಾತು ಸರಿದೋರಿ ಅವನು ಹೇಳಿದಂತೆ ಮಾಡಿದರು. ನಾಭಿಕಮಲದ ಹತ್ತಿರ ತೊಡೆದ ಗಂಧವು ಆರಲಿಲ್ಲ. ಆಗ ಅವನು ಶಿಲಾಶಾಸ್ತ್ರದಲ್ಲಿ ನಿಪುಣ ನಿರುವನೆಂಬ ಭರವಸವುಂಟಾಗಿ ಅವರು ಆ ಮೂರ್ತಿಯ ನಾಭಿಕಮಲವನ್ನು ಒಡೆದು ನೋಡಲಾಗಿ ಅವನು ಹೇಳಿದಂತೆ, ಒಳಗೆ ಕಪ್ಪೆ, ನೀರು, ಮುಂತಾದುವು ಕಂಡುಬಂದವು. ಅಲ್ಲಿಯ ಮಹಾಜನರಿಗೆಲ್ಲರಿಗೂ ಅತ್ಯಂತ ವಿಸ್ಮಯವುಂಟಾಗಿ
ಆ ಬಾಲಕನ ಕುಲಗೋತ್ರಗಳನ್ನು ಕೇಳಿದರು. ಅವನು, ತಾನು ಅದೇ ಜಕಣಾಚಾರ್ಯರ ಮಗನಾದ ಡಂಕಣಾಚಾರ್ಯನೆಂದೂ ತಮ್ಮ ತಂದೆಯು ಒಂದು ಜಾಗೆಯಲ್ಲಿ ಜ್ಯೋತಿಷಗಣನೆಯಲ್ಲಿ ತಪ್ಪಿ, ನಿಷ್ಕಾರಣವಾಗಿ ತನ್ನ ತಾಯಿಯ ಮೇಲೆ ವ್ಯಭಿಚಾರವನ್ನು ಆರೋಪಿಸಿದರೆಂದೂ ಹೇಳಿದನು. ಆಗ ತಂದೆ ಮಕ್ಕಳಿಬ್ಬರನ್ನೂ ಅರಸನು ಸನ್ಮಾನಿಸಿ, ತಂದೆ ಮಕ್ಕಳಿಬ್ಬರೂ ಕೂಡಿ ತಮ್ಮ ಉಭಯ ಚಾತುರ್ಯದಿಂದ ಹೊಸದೊಂದು ಅತ್ಯಂತ ಸುಂದರವಾದ ಗುಡಿಯನ್ನು ನಿರ್ಮಾಣ ಮಾಡಬೇಕೆಂದು ವಿಜ್ಞಾಪಿಸಿದನು. ಅದಕ್ಕೆ ಒಪ್ಪಿ, ಅವರಿಬ್ಬರೂ ಬೇಲೂರಲ್ಲಿರುವ ಈಗಿನ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದರು. ಬೇಲೂರಿನಲ್ಲಿ ಈಗ ಎರಡು ಗುಡಿಗಳುಂಟು. ಮೊದಲನೆಯ ಗುಡಿಯಲ್ಲಿಯ ಚೆನ್ನಕೇಶವ ಮೂರ್ತಿಯು ನಾಭಿಕಮಲದ ಹತ್ತರ ಭಿನ್ನವಾಗಿದೆ, ಮತ್ತು ಆ ಗುಡಿಯ ಹತ್ತರವೇ ಈಗಿನ ಹೊಸಗುಡಿಯು ನಿಂತಿದೆ. ಇದರಿಂದ, ಮೇಲಿನ ಕಥೆಗೆ ಪುಷ್ಟಿ ದೊರೆಯುತ್ತದೆ, ಮುಂದೆ ಜಕಣಾಚಾರ್ಯರು ತಮ್ಮ ಹುಟ್ಟಿದ ಊರು ಆದ ಕೈದಾಳದಲ್ಲಿ ಕೇಶವನ ಗುಡಿಯೊಂದನ್ನು ಕಟ್ಟಿಸಿದ ಕೂಡಲೆ
ಅವರ ಕೈಯು ಮತ್ತೆ ಚಿಗುರಿತಂತೆ.
ಇರಲಿ, ಕರ್ನಾಟಕ ಪ್ರಾಚೀನ ಶಿಲ್ಪಿಗರಲ್ಲಿ ದಾಸೋಜ, ಮಲ್ಲೋಜ, ನಾಗೋಜ ಮುಂತಾದ ಹೆಸರುಗಳು ಬಹಳ ದೊರೆಯುತ್ತವೆ. ಇವರ ಕುಲ ಜಾತಿಗಳನ್ನು ಸಂಶೋಧಕರೇ ಗೊತ್ತುಹಚ್ಚಬೇಕು.
ಕನ್ನಡಿಗರೆ! ಈ ನಿಮ್ಮ ಕಟ್ಟಡಗಳನ್ನು ನೋಡಿ ಧನ್ಯರಾಗಬಾರದೇ ?