೭ನೆಯ ಪ್ರಕರಣ
ಬಾದಾಮಿಯ ಚಾಲುಕ್ಯರ ವಂಶಾವಳಿ
ಜಯಸಿಂಹ | ||
↓ | ||
ರಾಜಸಿಂಹ, ರಣರಾಗ | ||
↓ | ||
೧. ಪುಲಿಕೇಶಿ, (೧ನೇ) | ||
(ಸತ್ಯಾಶ್ರಯ, ರಣವಿಕ್ರಮ,) | ||
=ದುರ್ಲಭಾದೇವಿ | ||
( ೫೫೦) | ||
↓ | ||
↓------------ | ------------↓ | |
೨. ಕೀರ್ತಿವರ್ಮ(೧ನೇ) ರಣಪರಾಕ್ರಮ | ೩. ಮಂಗಳೇಶ, ರಣವಿಕ್ರಾಂತ | |
(೫೬೬-೫೯೭) | (೫೯೭-೬೦೮) | |
↓ | ||
↓------------ | ------------↓ | |
೪. ಪುಲಿಕೇಶಿ(೨ನೇ) ಸತ್ಯಾಶ್ರಯ, | ಕುಬ್ಜ ವಿಷ್ಣುವರ್ಧನ | |
(೬೦೯-೬೪೨) | (೬೧೫-೬೩೩) | |
ಪೂರ್ವ ಚಾಲುಕ್ಯ ವಂಶ ಸ್ಥಾಪಕ | ||
↓ | ||
↓------------ | ------------↓ | ↓ |
ಆದಿತ್ಯವರ್ಮ | ಚಂದ್ರಾದಿತ್ಯ | ೫. ವಿಕ್ರಮಾದಿತ್ಯ(೧ನೇ) ರಣರಸಿಕ |
=ವಿಜಯಮಹಾದೇವಿ | (೬೫೫-೬೮೦) | |
(೬೫೫-೬೫೯) | ||
↓ | ||
೬. ವಿನಯಾದಿತ್ಯ, ರಾಜಾಶ್ರಯ (೬೮೦-೬೯೬) | ||
↓ | ||
೭. ವಿಜಯಾದಿತ್ಯ, ಸಮಸ್ತ ಭುವನಾಶ್ರಯ (೬೯೬-೭೩೩) | ||
↓ | ||
೮. ವಿಕ್ರಮಾದಿತ್ಯ(೨ನೇ)=ಲೋಕಮಹಾದೇವಿ (೭೩೩-೭೪೬). | ||
↓ | ||
೯. ಕೀರ್ತಿವರ್ಮ(೨ನೇ) (೭೪೬-೭೫೭) |
ಬಾದಾಮಿಯ ಚಾಲುಕ್ಯರು*
( ೫೫೦- ೭೫೭ )
- *ಈ ವಂಶದ ಶಿಲಾಲಿಪಿ, ತಾಮ್ರಪಟಗಳು ಕೂಡಿ, ಸುಮಾರು ೧೦೦ರವರೆಗೆ ದೊರೆತಿದ್ದರೂ, ಅವುಗಳಲ್ಲಿ ೫೦-೫೫ ಮಾತ್ರವೇ ಶೋಧಿಸಲ್ಪಟ್ಟವೆ. ಇವರ ಲೇಖಗಳು ಪಿಂಪಳನೇರ, ಹೈದರಾಬಾದ, ಚಿಪಳೂಣ, ಕುಂಡಲಗಾಂವ, ರಾಯಗಡ ಬದಾಮಿ, ಮಹಾಕೂಟ, ಅಡೂರ, ಐಹೊಳೆ, ಪಟ್ಟದಕಲ್ಲ ಮುಂತಾದ ಸ್ಥಳಗಳಲ್ಲಿ ದೊರೆಯುತ್ತವೆ. ೫೨ಕರ್ನಾಟಕ ಗತವೈಭವ
ಇವನು ಸಾರ್ವಭೌಮತ್ವ ಸೂಚಕವಾದ ಅಶ್ವಮೇಧಯಜ್ಞವನ್ನು ಮಾಡಿ ದಿಗಂತ ಕೀರ್ತಿಯನ್ನು ಪಡೆದನು. ಇವನ ಮಗನಾದ ಮಂಗಳೇಶನು (೫೯೭-೬೦೮) ಮಹಾಕೂಟೇಶ್ವರನ ಭಕ್ತನು, ಬಾದಾಮಿಯಲ್ಲಿಯ ಎಲ್ಲಕ್ಕೂ ದೊಡ್ಡದಾದ ಮೂರನೆಯ ವೈಷ್ಣವ ಗವಿಯನ್ನು ಕೊರೆಯಿಸಿದವನು ಇದೇ ಮಂಗಳೇಶನು.
ರಣ ನೋಡಿರಿ), ಪ್ರತಿಯೊಬ್ಬ ಕನ್ನಡಿಗನು ಅದನ್ನು ತನ್ನದೆಯ ಮೇಲೆ ಬರೆದಿಟ್ಟು ಕೊಳ್ಳಬೇಕು. ಈ ಪುಲಿಕೇಶಿಯಂಥ ವೈಭವ ಸಂಪನ್ನರಾದ ಅರಸರು ಹಿಂದುಸ್ಟಾನದ ಇತಿಹಾಸದಲ್ಲಿ ಬೆರಳಿನಿಂದೆಣಿಸುವಷ್ಟು ಸಹ ಸಿಕ್ಕುವುದು ಅಪೂರ್ವ. ಇವನ ವರ್ಚಸ್ಸು ಇರಾಣ ಮುಂತಾದ ಪರರಾಷ್ಟ್ರಗಳ ಮೇಲೆಯೂ ಇತ್ತೆಂದು ಗೊತ್ತಾಗುತ್ತದೆ. ಆರಬೀ ಭಾಷೆಯ ಒಂದು ಪುಸ್ತಕದಲ್ಲಿ ಈತನು ಇರಾಣದ ಅರಸನಾದ 'ಖುಸ್ತು'ವಿನ ಕಡೆಗೆ ತನ್ನ ರಾಯಭಾರಿಯನ್ನು ಕಳುಹಿಸಿದ್ದನೆಂದು ಉಲ್ಲೇಖವಿದೆ. ಮೇಲಾಗಿ, ಇರಾಣದ ರಾಯಭಾರಿಗಳು ಇವನ ಒಡೋಲಗಕ್ಕೆ ಬಂದಿದ್ದರೆಂಬುದು 'ಅಜಂತೆ' ಯಲ್ಲಿಯ ಗವಿಯೊಳಗಿನ ಒಂದು ಚಿತ್ರದಿಂದ ಗೊತ್ತಾಗುತ್ತದೆ. ಈ ಪುಲಿಕೇಶಿಯ ಪ್ರತ್ಯಕ್ಷ ದರ್ಶನವು ಆ ಚಿತ್ರದಲ್ಲಿ ಕನ್ನಡಿಗರಿಗೆ ಆಗುವಂತಿದೆ. ಕನ್ನಡಿಗರ ದುರ್ದೈವದಿಂದ, ಅದರಲ್ಲಿಯ ಪುಲಿಕೇಶಿಯ ಮುಖವನ್ನೇ ಯಾವನೊಬ್ಬ ದುಷ್ಟನು ಕೆಡಿಸಿರುವನು (ಚಿತ್ರವನ್ನು ನೋಡಿರಿ). ಆದರೆ ಅದೇ ಅಜಂತೆಯಲ್ಲಿರುವ ಮತ್ತೊಂದು ಗವಿಯಲ್ಲಿ ಒಂದು 'ರಾಜವಿಲಾಸ' ನೌಕೆಯ ಚಿತ್ರವಿದ್ದು, ಅದರಲ್ಲಿಯ ಮೂರ್ತಿಯು ಪುಲಿಕೇಶಿಯದೇ ಇರಬಹುದೆಂದು ನನಗೆ ತೋರುತ್ತದೆ. ಇರಲಿ! ಮುಖ್ಯವಾಗಿ ಹೇಳುವುದೇನೆಂದರೆ, ಈ ಪುಲಿಕೇಶಿಯ ಹೆಸರನ್ನು ಯಾವ ಕನ್ನಡಿಗನೂ ಎಂದಿಗೂ ಮರೆಯಕೂಡದು. ಇವನ ಪರಾಕ್ರಮದ ಮತ್ತು ರಾಜನೀತಿಯ ಕೃತ್ಯಗಳನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ! ಇವನ ಕಾಲದಲ್ಲಿ ಇವನ ಹಿರೆಯ ಸೊಸೆಯಾದ ವಿಜಯಭಟ್ಟಾರಿಕಾ ಎಂಬವಳು ಸಾವಂತವಾಡಿಯನ್ನಾಳಿದಳು. ಪುಲಿಕೇಶಿಯ ಮಗನ ಆಳಿಕೆಯಲ್ಲಿ ದಕ್ಷಿಣ ಗುಜರಾಥದಲ್ಲಿ ಚಾಲುಕ್ಯರದೊಂದು ಶಾಖೆಯು ಸ್ಥಾಪಿಸಲ್ಪಟ್ಟಿತು, ಇವನ ಮಗ, ಮೊಮ್ಮಗ, ಮರಿಮಕ್ಕಳು, ಇವರೆಲ್ಲ ಶೂರರಾದ ಅರಸರೇ. ಅವರು, ಈ ವಂಶದ ಹುಟ್ಟುಹಗೆಗಳಾದ ಪಲ್ಲವರೊಡನೆಯೂ, ಚೋಳ, ಪಾಂಡ್ಯ, ಹೈಹಯ ಮುಂತಾದವರೊಡನೆಯೂ ಕಲಿತನದಿಂದ ಕಾದಿ, ಚಾಲುಕ್ಯ ವಂಶದ ಹೆಸರನ್ನು ಶಾಶ್ವತವಾಗಿ ನಿಲ್ಲಿಸಿರುವರು. ಆದರೆ, ಇತಿಹಾಸವನ್ನು ಕೊಡುವುದು ನಮ್ಮ ಮುಖ್ಯ ಉದ್ದೇಶವಿರದೆ, ವೈಭವವನ್ನು ಕಣ್ಣೆದುರಿಗೆ ತಂದಿಡುವುದೇ ನಮ್ಮ ಮುಖ್ಯ ಮನೋಗತವಿರುವುದರಿಂದ, ನಾವು ಹೆಚ್ಚಿನ ಸಂಗತಿಗಳನ್ನು ಇಲ್ಲಿ ಹೇಳಿರುವುದಿಲ್ಲ. ಈ ಮಹಾಪುಲಿಕೇಶಿಯಿಂದ ನಾಲ್ಕನೆಯ ತಲೆಯವನಾದ ೨ನೆಯ ವಿಕ್ರಮಾದಿತ್ಯನು
ತನ್ನ ವಂಶಕ್ಕೆ ಪೂರ್ವದಿಂದಲೂ ಶತ್ರುಗಳಾದ ಪಲ್ಲವರೊಡನೆ ಹೋರಾಡಿ, ಮಾಣಿಕ್ಯದ ರಾಶಿಯನ್ನೂ, ಗಜ-ತುರಗಗಳನ್ನೂ, ಯಥೇಚ್ಚವಾಗಿ ತೆಗೆದುಕೊಂಡು ಅವರ ರಾಜಧಾನಿಯಾದ ಕಂಚಿಯನ್ನು ಹೊಕ್ಕ ಸಂಗತಿಯು ಮಾತ್ರ ನೆನಪಿನಲ್ಲಿಡ ತಕ್ಕುದಾಗಿದೆ. ಏಕೆಂದರೆ, ಈ ವಿಕ್ರಮಾದಿತ್ಯನು ಮಿಕ್ಕವರಂತೆ, ಆ ಪಟ್ಟಣವನ್ನು ಹಾಳುಮಾಡದೆ, ದೇವ ಬ್ರಾಹ್ಮಣರಿಗೂ ಬಡಬಗ್ಗರಿಗೂ ಅನೇಕ ದಾನ ಮುಂತಾದವುಗಳನ್ನು ಮಾಡಿ, ಅಲ್ಲಿಯ ರಾಜಸಿಂಹೇಶ್ವರ ಮುಂತಾದ ದೇವಾಲಯಗಳನ್ನು ಉದ್ದರಿಸಿದನು. ಇವನ ಹೆಂಡತಿಯಾದ ಲೋಕಮಹಾದೇವಿಯೆಂಬವಳು ಈತನ ಈ ಜಯದ ಸೂಚನಾರ್ಥವಾಗಿ ಪಟ್ಟದಕಲ್ಲಿನಲ್ಲಿ ವಿರೂಪಾಕ್ಷನ ಅತಿ ವಿಸ್ತಾರವಾದ ದೇವಾಲಯವನ್ನು (೬೫೬, ಶಕ) ಕಟ್ಟಿಸಿದಳು, ಇವಳು ಆ ಕಾಲದಲ್ಲಿ 'ಕಿಸುವೊಳಲ್' ಎಂದರೆ ಪಟ್ಟದಕಲ್ಲಿನಲ್ಲಿ ಆಳುತ್ತಿದ್ದಳು. ಆದರೆ, ಇವನ ಮಗನ ಕಾಲಕ್ಕೆ, ಏಳೆಂಟು ತಲೆಗಳಿಂದ ಅವಿಚ್ಛಿನ್ನವಾಗಿ ನಡೆಯುತ್ತ ಕೈವಶವಾಗಿದ್ದ ರಾಜ್ಯಲಕ್ಷಿಯು ಈ ವಂಶವನ್ನು ಬಿಟ್ಟು ಹೋದಳು. ರಾಷ್ಟ್ರಕೂಟದ ಅರಸನಾದ ದಂತಿದುರ್ಗನೆಂಬವನು ಇವನ ರಾಜ್ಯವನ್ನು ಸೆಳೆದುಕೊಂಡು, ರಾಷ್ಟ್ರಕೂಟವಂಶ ವನ್ನು ಸ್ಥಾಪಿಸಿದನು.
ಈ ಬಗೆಯಾಗಿ, ಕರ್ನಾಟಕವನ್ನಲ್ಲ ಒಂದೇ ಛತ್ರದ ಕೆಳಗೆ ತಂದು ಕರ್ನಾಟಕದ ಕೀರ್ತಿಯನ್ನು ದಶ ದಿಕ್ಕುಗಳಲ್ಲಿ ಪಸರಿಸುವಂತೆ ಮಾಡಿದ ಈ ಚಾಲುಕ್ಯರು ಕೆಲವು ಕಾಲ ಇತಿಹಾಸದಿಂದ ಮರೆಯಾದರು. ಆದರೆ, ಚಾಲುಕ್ಯರು ಮುಳುಗಿದರೂ, ಕರ್ನಾಟಕ ವೈಭವವು ಮುಳುಗಲಿಲ್ಲ, ಏಕೆಂದರೆ, ಇವರ ತರುವಾಯ ಬಂದ ಅರಸರೂ ಕರ್ನಾಟಕಸ್ಥರೇ. ಅವರೂ ಏಕಛತ್ರಾಧಿಪತಿಗಳೇ. ಇರಲಿ. ಅವರ ಇತಿಹಾಸವನ್ನು ಮುಂದಿನ ಪ್ರಕರಣದಲ್ಲಿ ಕೊಡುವೆವು, ಈ ಚಾಲುಕ್ಯ ವಂಶದ ೨ನೆಯ ಪುಲಿಕೇಶಿ, ಅವನ ಸೊಸೆಯಾದ 'ವಿಜಯಭಟ್ಟಾರಿಕೆ' ಮತ್ತು ೨ನೆಯ ವಿಕ್ರಮಾದಿತ್ಯನ ಹೆಂಡತಿಯಾದ 'ಲೋಕಮಹಾದೇವಿ' ಮುಂತಾದವರು ಕನ್ನಡಿಗರ ಸ್ಮೃತಿಪಥದಿಂದ ಮರೆಯಾಗುವುದೆಂತು ! ಹ್ಯುವೆನ್‌ತ್ಸಂಗನು ವರ್ಣಿ ಸಿದ ಕನ್ನಡಿಗರ ಸ್ವಭಾವವೂ, ಶೌರ್ಯವೂ, ಕನ್ನಡಿಗರಲ್ಲಿದ್ದ ಅವರ ವಿಷಯ ದಲ್ಲಿಯ ಅನಾದರವನ್ನು ಓಡಿಸಲಾರವೇ! ಬಾದಾಮಿಯ ಗವಿಗಳೂ, ಅಜಂತ ಯಲ್ಲಿಯ ಅತ್ಯಂತ ಸುಂದರವಾದ ಚಿತ್ರಗಳೂ ಈ ಚಾಲುಕ್ಯ ವಂಶದೀಪಕರನ್ನು
ಕನ್ನಡಿಗರ ಕಣ್ಣಿದಿರಿಗೆ ಥಟ್ಟನೆ ತಂದಿರಿಸದೆ ಇರವು. ಪ್ರಸಿದ್ದ ಜೈನ ಕವಿಯಾದ 'ರವಿಕೀರ್ತಿ'ಯು ೨ನೆಯ ಪುಲಕೇಶಿಯ ಸಂಬಂಧವಾಗಿ ಐಹೊಳೆಯಲ್ಲಿ ಶಿಲಾಲೇಖವನ್ನು ಬರೆದಿಟ್ಟು ಕನ್ನಡಿಗರ ವೈಭವಕ್ಕೆ ಸಾಕ್ಷಿಯಾಗಿ ನಿಂತಿರುತ್ತಾನೆ. ಕನ್ನಡಿಗರು ಆ ಲೇಖವನ್ನೇ ಕಣ್ಣೆರದು ನೋಡದಿದ್ದರೆ ಅವನೇನು ಮಾಡಿಯಾನು!