೯ನೆಯ ಪ್ರಕರಣ
ಕಲ್ಯಾಣ-ಚಾಲುಕ್ಯರ ವಂಶಾವಳಿ
ತೈಲಪ (೯೭೩-೯೯೭) |
↓ |
ಸತ್ಯಾಶ್ರಯ, ಇರಿವ-ಬೆಡಂಗ (೯೯೭-೧೦೦೮). |
↓ |
ವಿಕ್ರಮಾದಿತ್ಯ (೧೦೦೮-೧೦೧೮) |
↓ |
ಜಯಸಿಂಹ, ಜಗದೇಕಮಲ್ಲ (೧೦೧೮-೧೦೪೦) |
↓ |
ಸೋಮೇಶ್ವರ (೧ನೇ), ಆಹವಮಲ್ಲ, ತ್ರೈಲೋಕ್ಯಮಲ್ಲ (೧೦೪೦-೧೦೬೯) |
↓ |
ಸೋಮೇಶ್ವರ (೨ನೇ), ಭುವನೈಕಮಲ್ಲ (೧೦೬೯-೧೦೭೬). |
↓ |
ಚಾಲುಕ್ಯ ವಿಕ್ರಮ, ವಿಕ್ರಮಾದಿತ್ಯ, ತ್ರಿಭುವನಮಲ್ಲ (೧೦೭೬-೧೧೨೬). |
↓ |
ಸೋಮೇಶ್ವರ (೩ನೇ), ಭೂಲೋಕವಲ್ಲ (೧೧೨೬-೧೧೩೮) |
↓ |
ಜಗದೇಕಮಲ್ಲ (೧೧೩೮-೧೧೦) |
↓ |
ತೈಲಪ, ತೈಲೋಕ್ಯಮಲ್ಲ, ನೂರ್ಮಡಿ (೧೧೫೦-೧೧೬೫) |
↓ |
ಸೋಮೇಶ್ವರ (೪ನೇ), ತ್ರಿಭುವನಮಲ್ಲ (೧೧೮೨-೧೧೮೯) |
ಕಲ್ಯಾಣದ ಚಾಲುಕ್ಯರು.*
(೯೭೩-೧೧೮೦)
ಶ್ರೀವಲ್ಲಭನಹಿತಜಯ | ಶ್ರೀವಲ್ಲಭನೆನಿಸಿ ವಿಕ್ರಮಾದಿತ್ಯಂಗಂ ||
ವಧುವೊಲೆಸೆವ ಬೊಂಧಾ | ದೇವಿಗವಾದಂ ತನೂಭವಂ ತೈಲನೃಪಂ ||
आसेतोः कार्तराशे रघुकुलतिलकस्याच शैलाधिराजा ।
दाच प्रत्यक्पयोधेश्चटुलतिमिकुलोत्तुङ्गरिङ्गतरङ्गात् ॥
आचपृथ्वीसमुद्रान्नतनृपतिशिरोरत्नभाभासुरांघ्रिः ।
पायादाचन्द्रतारं जयदिदमखिलं विक्रमादित्यदेवः ।।
अथ सुरपथवल्गद्दिव्यभेरीनिनादं ।
प्रशमितपरितापं भर्तलाभात्पृथिव्याः ||
अलभत चिरिचत्ताचान्त चालुक्यलक्ष्मी |
क्लममुषमभिषेकं विक्रमादित्यदेवः ॥
श्रीचालुक्यनरेंद्रसूनुरनुजं तत्रैव पुण्ये दिने ।
कारुण्यातिशयादसूत्रयदसा पात्रं महत्यः श्रियः ।।
दासी यद्भवनेषु विक्रमधनक्रीता ननु श्रीरियम् |
तेषामाश्रितपोपणाय गहनं किं नाम पृथ्वीभुजाम् ॥
ನ್ನಡಿಗರೇ, ಈ ಪ್ರಕರಣದಲ್ಲಿ ನಾವು ನಿಮ್ಮ ರಾಜವೈಭವದ ಪರಮಾವಧಿಯನ್ನು ವರ್ಣಿಸುವೆವು, ಈ ಕಲ್ಯಾಣ ಚಾಲುಕ್ಯರ ಕಾಲವೆಂದರೆ ಕರ್ನಾಟಕ ವೈಭವ ಸೂರ್ಯನ ಮಧ್ಯಾನ್ಹ ಕಾಲವು. ಬಾದಾಮಿಯ ಚಾಲುಕ್ಯರು ಬಿತ್ತಿದ
- *ಈ ಚಾಲುಕ್ಯರ ಲೇಖಗಳು ಸುಮಾರು ೩೦೦-೪೦೦ ದೊರೆತಿರುತ್ತವೆ. ಆದರೆ ಮೈಸೂರಿನವರು ಮುದ್ರಿಸಿದ ಲೇಖಗಳನ್ನು ಬಿಟ್ಟರೆ ಇತ್ತ ಕಡೆಗೆ ೧೦೦-೧೧೫ ಲೇಖಗಳು ಮಾತ್ರವೇ ಪ್ರಸಿದ್ಧವಾಗಿರುತ್ತವೆ. ಚಾಲುಕ್ಯ ವಿಕ್ರಮನೊಬ್ಬನ ಶಿಲಾ ಲೇಖಗಳೇ ಇನ್ನೂರರ ಮೇಲೆ ಇರುತ್ತವೆ. ಇವರ ಶಿಲಾಲೇಖಗಳು ಗದಗ, ಭೈರನಟ್ಟಿ, ಅಮ್ಮಿನಭಾವಿ, ಮಿರಜ, ಬ೦ಕಾಪುರ, ಕರಿಗುದರಿ ಮು೦ತಾದ ಅನೇಕ ಸ್ಥಳಗಳಲ್ಲಿ ದೊರೆಯುತ್ತವೆ. ೬೨ಕರ್ನಾಟಕ ಗತವೈಭವ
ಬೀಜವು ರಾಷ್ಟ್ರಕೂಟರ ಕಾಲದಲ್ಲಿ ವೃಕ್ಷವಾಗಿ ಬೆಳೆದು, ಅದರ ಸವಿಯಾದ ಫಲಗಳು ಈ ಕಲ್ಯಾಣಚಾಲುಕ್ಯರ ಕಾಲದಲ್ಲಿ ತಿನ್ನಲಿಕ್ಕೆ ದೊರೆತವು. ಇವರ ಕಾಲದಲ್ಲಿ ಕನ್ನಡಿಗರ ಕೀರ್ತಿಯು ದಶದಿಕ್ಕುಗಳಲ್ಲಿ ಹಬ್ಬಿತು. ಕನ್ನಡಿಗರ ಧ್ವಜಪತಾಕೆಯು ಈಶಾನ್ಯಕ್ಕೆ ಅಸಾಮ ಪ್ರಾಂತದಲ್ಲಿ ಊರಲ್ಪಟ್ಟಿತು, ಕರ್ನಾಟಕ ಅರಸರು ಅನೇಕ ಕವಿ ಪುಂಗವರಿಗೂ ವಿದ್ವಜ್ಜನರಿಗೂ ಆಶ್ರಯದಾತರಾದರು. ಈ ಬಗೆಯಾಗಿ ಕನ್ನಡಿಗರಿಗೆ ಅತ್ಯಂತ ಅಭಿಮಾನಾಸ್ಪದವಾದ ಈ ಚಾಲುಕ್ಯರ ಇತಿಹಾಸವನ್ನು ಇಲ್ಲಿ ಕೊಡುವೆವು.
ಈ ಚಾಲುಕ್ಯ ವಂಶದ ಮೂಲಪುರುಷನು ತೈಲಪನು. ಇವನು ಚೋಳ ಅರಸನನ್ನೂ ಚೇದಿ (ಬುಂದೇಲಖಂಡ) ಅರಸನನ್ನೂ ಗೆದ್ದನು. ಈ ತೈಲಪನು ಗುಜರಾಥ ಚಾಲುಕ್ಯ ವಂಶದ ಮೂಲಪುರುಷನಾದ ಮೂಲರಾಜನ ಮೇಲೆ ಬಾರಪ್ಪ ನೆಂಬವನನ್ನು ಕಳಿಸಿದನು. ಆತನು ಮೂಲರಾಜನನ್ನು ಸೋಲಿಸಿದನು. ಆ ಮೇಲೆ ತೈಲಪನು ಮಾಳವದೇಶದ ಮೇಲೆ ದಾಳಿಯಿಟ್ಟನು. ಭಾರತೀಯರಿಗೆಲ್ಲರಿಗೂ ಅತಿ ಪರಿಚಿತನಾದ ಪ್ರಸಿದ್ದ ಭೋಜರಾಜನ ಕಕ್ಕನಾದ ಮುಂಜನೆಂಬವನೇ ಆಗ ಮಾಳವಾಧಿಪತಿಯಾಗಿದ್ದನು. ಈ ಮುಂಜನು ದೊಡ್ಡ ಸೈನ್ಯದೊಂದಿಗೆ ಗೋದಾವರಿಯನ್ನು ದಾಟಿ ಬಂದು ತೈಲಪನನ್ನು ಕೆಣಕಿದನು. ಆದರೆ ತೈಲಪನು ಅವನನ್ನು ಸೋಲಿಸಿ ಸೆರೆಹಿಡಿದನು. ಮುಂಜನು ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದ್ದರಿಂದ ತೈಲಪನು ಆತನ ತಲೆ ಹಾರಿಸಿದನು. ಈತನ ಮಾಂಡಲಿಕನೊಬ್ಬನು ಸವದತ್ತಿಯಲ್ಲಿ ಜೈನಗುಡಿಗೆ ಭೂಮಿದಾನ ಕೊಟ್ಟಿರುತ್ತಾನೆ. ತೈಲಪನ ಹೆಂಡತಿಯ ಹೆಸರು ಜಾಕವ್ವ, ಇವಳು ತೈಲವನು ಮುರಿದ ರಾಷ್ಟ್ರಕೂಟವಂಶದ ರಾಜಪುತ್ರಿಯು.
ದ್ರ ಮಾರ್ಗದಿಂದ ದಕ್ಷಿಣಕ್ಕೆ ಇಳಿದುಬಂದನು. ಮುಂದೆ ಚೋಳರ ರಾಜಧಾನಿಯಾದ ಕಂಚಿಯನ್ನು ತೆಗೆದುಕೊಂಡು, ಆ ಅರಸನನ್ನು ಓಡಿಸಿದನು. ಈ ಸೋಮೇಶ್ವರನು ಉತ್ತರದಲ್ಲಿ ಕನ್ಯಾಕುಬ್ಜ ಅಂದರೆ ಕನೋಜದ ಅರಸನನ್ನು ಗೆದ್ದದರಿಂದ ಅವನು ಓಡಿಹೋಗಿ ಅಡವಿಯನ್ನು ಆಶ್ರಯಿಸಬೇಕಾಯಿತು. ಸೋಮೇಶ್ವರನೇ ಕಲ್ಯಾಣ ಪಟ್ಟಣವನ್ನು ಸ್ಥಾಪಿಸಿ ಅದನ್ನು ರಾಜಧಾನಿಯನ್ನಾಗಿ ಮಾಡಿದನು. ಇವನಿಗೆ ಸೋಮೇಶ್ವರ, ವಿಕ್ರಮಾದಿತ್ಯ, ಮತ್ತು ಜಯಸಿಂಹ ಹೀಗೆ ಮೂರುಮಂದಿ ಮಕ್ಕಳು. ೨ನೆಯ ಮಗನಾದ ವಿಕ್ರಮಾದಿತ್ಯನು ಇವರೆಲ್ಲರೊಳಗೆ ಚತುರನೂ ವಿದ್ವಾಂಸನೂ ಆಗಿದ್ದನು. ಅವನನ್ನೇ ಯುವರಾಜನನ್ನಾಗಿ ಮಾಡಬೇಕೆಂದು ಸೋಮೇಶ್ವರನ ಇಚ್ಛೆ, ಆದರೆ ವಿಕ್ರಮಾದಿತ್ಯನು ತನ್ನ ಅಣ್ಣನ ಹಕ್ಕನ್ನು ಮುಳುಗಿಸಲು ಇಚ್ಚಿಸಲಿಲ್ಲ. ಆದರೂ ತಂದೆಗೆ ಆತನ ಸಮರ ಸಾಹಸಗಳಲ್ಲಿ ಸಹಾಯ ಮಾಡಿದವನು ವಿಕ್ರಮನೇ. ಈ ವಿಕ್ರಮನು ಮೊದಲು ಚೋಳರನ್ನು ಗೆದ್ದು ಆ ರಾಜ್ಯವನ್ನು ತನ್ನ ರಾಜ್ಯಕ್ಕೆ ಕೂಡಿಸಿಕೊಂಡನು. ಮಾಳವದ ಅರಸನಿಗೆ ಸಹಾಯ ಮಾಡಿ, ಅವನು ಕಳೆದುಕೊಂಡ ಪಟ್ಟವನ್ನು ಅವನಿಗೆ ಕೊಡಿಸಿದನು. ಬಂಗಾಲ ಅಸಾಮು ಪ್ರಾಂತಗಳ ಮೇಲೆ ದಾಳಿ ಇಟ್ಟನು. ಕೇರಳರನ್ನು ಕೆಣಕಿದನು, ಸಿಂಹಳ ದ್ವೀಪದ ಅರಸನು ಇವನಿಗೆ ಶರಣಾಗತನಾದನು. ಕಂಚಿಯನ್ನು ಕೈವಶಮಾಡಿ ಕೊಂಡನು. ಅಲ್ಲಿಂದ ವೆಂಗಿದೇಶ ಅಂದರೆ ತೆಲುಗು ದೇಶದ ಕಡೆಗೆ ಹೊರಳಿದನು. ಹೀಗೆ ವಿಕ್ರಮಾದಿತ್ಯನು ಒಂದೇ ಸಮನೆ ರಾಜ್ಯಗಳನ್ನು ಗೆಲ್ಲುತ್ತ ಸಾಗಿರಲು, ಇತ್ತ ಅವನ ತಂದೆಯಾದ ಸೋಮೇಶ್ವರನಿಗೆ ವಿಷಮ ಜ್ವರ ಹುಟ್ಟಿತು. ಇನ್ನು ತನಗೆ ಬದುಕುವ ಆಶೆಯಿಲ್ಲವೆಂದು ತಿಳಿದ ಕೂಡಲೆ ಅವನು ತುಂಗಭದ್ರೆಯ ಬದಿಗೆ ಬಂದು, ಸುವರ್ಣದಾನ ಮೊದಲಾದುವುಗಳನ್ನು ಮಾಡಿ ನದಿಯಲ್ಲಿ ಹೋಗಿ ಮುಳುಗಿ ಸತ್ತು ಹೋದನು, ಆಹವಮಲ್ಲನು ವಿದ್ಯಾ ಪಕ್ಷಪಾತಿಯು, ವಿದ್ವಾಂಸರಿಗೆ ಆಶ್ರಯದಾತನು, ಇವನ ಸದ್ಗುಣಗಳ ಮೂಲಕ, ಕವಿಗಳು ಇವನನ್ನು ತನ್ನ ಕಾವ್ಯಗಳಲ್ಲಿ ನಾಯಕನನ್ನಾಗಿ ಮಾಡಿರುವರೆಂದು ಬಿಲ್ಲ ಣನು ಇವನನ್ನು ವರ್ಣಿಸಿದ್ದಾನೆ.
ತಮ್ಮ ತಂದೆಯು ಸತ್ತ ಸುದ್ದಿ ಯನ್ನು ಕೇಳಿ, ರಾಜಧಾನಿಗೆ ಬಂದು ತಾನು ತಂದ ಸುಲಿಗೆಯನ್ನೆಲ್ಲ ಅಣ್ಣನ ವಶಕ್ಕೆ ಒಪ್ಪಿಸಿದನು. ಆದರೆ ಈ ಸೋಮೇಶ್ವರನ ಆಳ್ವಿಕೆಯು ಪ್ರಜೆಗಳಿಗೆ ಸುಖಕರವಾಗಲಿಲ್ಲ. ಅವನು ತನ್ನ ಮಂತ್ರಿಗಳ ಮಾತನ್ನೂ ಕೇಳಲಿಲ್ಲ. ತನ್ನ ಕುಶಲ ತಮ್ಮನಾದ ವಿಕ್ರಮಾದಿತ್ಯನ ಉಪದೇಶಕ್ಕೂ ಕಿವಿಗೊಡಲಿಲ್ಲ. ಮನಬಂದಂತೆ ವರ್ತಿಸಿ ಪ್ರಜೆಗಳನ್ನು ಅಸಂತುಷ್ಟ ಪಡಿಸಿದನು. ಇಷ್ಟೇ ಅಲ್ಲ, ತನ್ನ ತಮ್ಮನಾದ ವಿಕ್ರಮಾದಿತ್ಯನಿಗೆ ವಿರುದ್ಧವಾಗಿಯೇ ಪ್ರಯತ್ನ ನಡಿಸಿದನು. ಈ ಸಂಗತಿಯನ್ನು ತಿಳಿದುಕೊಂಡು, ವಿಕ್ರಮಾದಿತ್ಯನು ದೊಡ್ಡದೊಂದು ಸೈನ್ಯದೊಡನೆ ತನ್ನ ತಮ್ಮನಾದ ಜಯಸಿಂಹನನ್ನು ಕರೆದುಕೊಂಡು ರಾಜಧಾನಿಯನ್ನು ಬಿಟ್ಟನು. ಸೋಮೇಶ್ವರನು ತಮ್ಮನನ್ನು ಹಿಡಿಯಲಿಕ್ಕೆ ಸೈನ್ಯ ಕಳುಹಿದನು. ಆದರೆ ವಿಕ್ರಮನು ಅದನ್ನು ನುಚ್ಚು ನುರೆಯಾಗಿ ಮಾಡಿದನು. ಅನಂತರ ವಿಕ್ರಮನು ಕದಂಬರನ್ನು ಕೂಡಿಕೊಂಡು, ಅವರ ಅರಸನಾದ ಜಯಕೇಶಿಯಿಂದ ವಿಪುಲವಾಗಿ ಧನಕನಕಾದಿಗಳನ್ನು ತೆಗೆದುಕೊಂಡು ಚೋಳರಾಜ್ಯದ ಕಡೆಗೆ ತಿರುಗಿದನು. ಸೋಮೇಶ್ವರನ ಆಳಿಕೆಗೆ ಜನರು ಮೊದಲೇ ಬೆಸತ್ತದರಿಂದ, ವಿಕ್ರಮನು ಹೋದ ಹೋದಲ್ಲಿ, ಮಾಂಡಲಿಕ ಅರಸರು ಅವನನ್ನು ಗೌರವಿಸುತ ಬಂದರು. ಆಳುಪ ಕೇರಳ ಮುಂತಾದ ರಾಜ್ಯಗಳ ಅರಸರು ಈ ಬಗೆ ಯಾಗಿ ವಿಕ್ರಮನಿಗೆ ನೆರವಾದುದರಿಂದ, ಅವನು ಧೈರ್ಯದಿಂದ ಚೋಳರಾಜ್ಯದ ದಾರಿ ಹಿಡಿದು ಅಲ್ಲಿಗೆ ಬಂದು ಸೈನ್ಯದೊಂದಿಗೆ ತಲ್ಪಿದನು. ಅಲ್ಲಿಯ ಅರಸನು ವಿಕ್ರಮನೊಡನೆ ಸಂಧಿಯನ್ನು ಮಾಡಬೇಕೆಂದು ಕುತೂಹಲವುಳ್ಳವನಾಗಿ, ತನ್ನ ಮಗಳನ್ನು ಅವನಿಗೆ ಮದುವೆಮಾಡಲು ಇಚ್ಚಿಸಿದನು. ವಿಕ್ರಮನು ಬಹು ಧೂರ್ತನು. ಅವನು ಈ ಸುಸಂಧಿಯನ್ನು ಕಳೆದುಕೊಳ್ಳದೆ ಆ ಚೋಳರಾಜ ಪುತ್ರಿಯನ್ನು ಮದುವೆ ಮಾಡಿಕೊಂಡು ಅವಳೊಂದಿಗೆ ತುಂಗಭದ್ರಾ ನದಿಯ ತೀರಕ್ಕೆ ಬಂದು ತಳ ಊರಿದನು. ಕೆಲವು ದಿವಸಗಳಲ್ಲಿಯೇ ಚೋಳ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಯಿತು. ವಿಕ್ರಮನ ಮಾವನು ಮಡಿದನು, ಒಡನೆಯೆ ವಿಕ್ರಮನು ಕಂಚಿಗೆ ಹೋಗಿ ತನ್ನ ಬೀಗನನ್ನು ಪಟ್ಟಕ್ಕೆ ಕುಳ್ಳಿರಿಸಿದನು. ಆದರೆ ವಿಕ್ರಮನು ಮರಳಿ ಬಂದ ಕೂಡಲೆ, ವೆಂಗಿದೇಶದ ಅರಸನಾದ ಕುಲೋತ್ತುಂಗ ಅಥವಾ ರಾಜಿಗನೆಂಬ ಮಹಾ ಪ್ರತಾಪಿಯು ವಿಕ್ರಮನ ಬೀಗನನ್ನು ಗಾದಿಯಿಂದ ತಳ್ಳಿ ಚೋಳ
ಸಿಂಹಾಸನವನ್ನು ಆಕ್ರಮಿಸಿದನು. ಇನ್ನು ವಿಕ್ರಮನು ತನ್ನ ಮೇಲೆ ಏರಿಬರುವನೆಂದು ತಿಳಿದು ಆ ರಾಜಿಗನು ವಿಕ್ರಮನ ಅಣ್ಣನಾದ ಸೋಮೇಶ್ವರನ ಕಿವಿಯೂದಿ ಅವನನ್ನು ವಿಕ್ರಮನಿಗೆ ವಿರುದ್ಧವಾಗಿ ನಿಲ್ಲಿಸಿದನು. ಈ ಹೊತ್ತಿನಲ್ಲಿ ವಿಕ್ರಮನು ತೋರಿಸಿದ ಶೌರ್ಯ ಧೈರ್ಯಗಳು ವಿಲಕ್ಷಣವಾಗಿದ್ದುವು. ಇತ್ತ ಮೇಲ್ಗಡೆಯಿಂದ ತನ್ನ ಅಣ್ಣನಾದ ಸೋಮೇಶ್ವರನು ಬೆನ್ನಟ್ಟಿ ಬರುತ್ತಿದ್ದನು. ಇತ್ತ ರಾಜಿಗನ ಸೈನ್ಯವು ದಕ್ಷಿಣದಿಂದ ವಿಕ್ರಮನನ್ನು ಮೇಲಕ್ಕೆತ್ತಬೇಕೆಂದು ಹವಣಿಸಿತು. ಆದರೆ ವಿಕ್ರಮನು ತನ್ನ ಅಣ್ಣನನ್ನು ಅಲಕ್ಷಿಸಿ, ರಾಜಿಗನ ಸೈನ್ಯವನ್ನು ಸೋಲಿಸಬೇಕೆಂದು ದಕ್ಷಿಣಕ್ಕೆ ಸಾಗಿದನು. ರಾಜಿಗನ ಸೈನ್ಯದ ಹತ್ತಿರ ಬಂದು ತಲ್ಪುವಷ್ಟರಲ್ಲಿ ಅಣ್ಣನ ಸೈನ್ಯವು ವಿಕ್ರಮನ ಸೈನ್ಯದ ಬೆನ್ನು ಹಿಂದೆ ಬಂದು ನಿಂತಿತು. ವಿಕ್ರಮನು ಈ ಆತ್ಮಘಾತಕತನದ ಕೃತ್ಯವು ಸರಿಯಲ್ಲವೆಂದು ತನ್ನ ಅಣ್ಣನಿಗೆ ಉಪದೇಶಿಸಿದನು. ಆದರೆ ಸೋಮೇಶ್ವರನಿಗೆ ಅದನ್ನು ಆಲಿಸುವಷ್ಟು ಬುದ್ದಿಯು ಎಲ್ಲಿತ್ತು ? ಆದುದರಿಂದ ನಿರುಪಾಯನಾಗಿ, ಅತ್ಯಂತ ಧೈರ್ಯ ತಾಳಿ, ಬೆನ್ನ ಹಿಂದಿನ ಮತ್ತು ಬೆನ್ನ ಮುಂದಿನ – ಹೀಗೆ ಎರಡೂ ಕಡೆಯ ಸೈನ್ಯಗಳೊಂದಿಗೆ ಒಮ್ಮೆಲೆ ಯುದ್ದ ಮಾಡುವುದನ್ನೇ ನಿಶ್ಚಯಿಸಿದನು. ಮತ್ತು ರಾಜಿಗನ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದ್ದರಿಂದ ರಾಜಿಗನು ಪಲಾಯನ ಸೂಕ್ತವನ್ನು ಹೇಳಿದನು. ಇತ್ತ ಸೋಮೇಶ್ವರ ನನ್ನಂತೂ ಸೆರೆಯಾಳಾಗಿಯೇ ಹಿಡಿದನು. ಮುಂದೆ ಅವನನ್ನು ಸಿಂಹಾಸನದಿಂದ ತಳ್ಳಿ ತಾನೇ ಪಟ್ಟವೇರಿ ರಾಜ್ಯವಾಳಲು ಪ್ರಾರಂಭಿಸಿದನು.
ಈ ವಿಕ್ರಮನಿಗೆ ಚಾಲುಕ್ಯ ವಿಕ್ರಮ ಅಥವಾ ತ್ರಿಭುವನಮಲ್ಲ ನೆಂದು ಹೆಸರು. ಕಲಿವಿಕ್ರಮ ಅಥವಾ ಪರ್ಮಾಡಿರಾಯನೆಂದೂ ಬಿರುದುಗಳುಂಟು. ಈತನು ತಾನು ಪಟ್ಟವೇರಿದ ಕೂಡಲೇ, ತನ್ನದೊಂದು ಬೇರೆ ಶಕವನ್ನು ಪ್ರಾರಂಭಿಸಿದನು, ಆದರೆ ಅವನ ತರುವಾಯದಲ್ಲಿ ಆಗಿ ಹೋದ ಅರಸರು ಅವನಂತೆ ಬಲಾಢ್ಯರಾಗಿಲ್ಲದ್ದರಿಂದ ಆ ಶಕವು ಮುಂದೆ ಬಹಳ ದಿವಸ ಬಾಳಲಿಲ್ಲ. ಇರಲಿ, ವಿಕ್ರಮನು ಅರಸನಾದ ನಂತರ, ಕರಾಡಕ್ಕೆ ಹೋಗಿ ಅಲ್ಲಿಯ ಅರಸನ ಮಗಳಾದ ಚಂದ್ರ ಲೇಖಾ ಅಥವಾ ಚಂದಲಾದೇವಿಯನ್ನು ಮದುವೆಯಾದನು. ಇವಳು ಅತ್ಯಂತ ಸುಂದರಿಯು. ವಿಕ್ರಮನು ಪಟ್ಟವೇರಿದ ನಂತರ, ಅವನ ತಮ್ಮನಾದ ಜಯಸಿಂಹನಿಗೆ ದುರಾಶೆ ಹುಟ್ಟಿ ಅವನು ಅಣ್ಣನಿಗೆ ವಿರುದ್ದವಾಗಿ ಬನವಾಸಿಯಲ್ಲಿ ಒಳಸಂಚು ಹೂಡಿದನು, ಚಾಲುಕ್ಯ ವಿಕ್ರಮನು ಅವನಿಗೆ ಹಾಗೆ ಮಾಡಬೇಡವೆಂದು ಒಳ್ಳೆಯ ರೀತಿಯಿಂದ ಹೇಳಿ ನೋಡಿದರೂ ಅವನು ಕೇಳಲಿಲ್ಲ. ಜಯಸಿಂಹನು ತನ್ನದೊಂದು ಸೈನ್ಯವನ್ನೇ ಸಿದ್ಧ ಪಡಿಸಿ ಕೃಷ್ಣಯ ದಡಕ್ಕೆ ಬಂದು ತಳ ಊರಿದನು, ಅಲ್ಲಿ ಅಣ್ಣ ತಮ್ಮಂದಿರ ನಡುವೆ ಭಯಂಕರ ಕಾಳಗವೆಸಗಿತು. ಜಯಸಿಂಹನು ಓಡಿ ಅಡವಿಯ ಪಾಲಾದನು. ಮುಂದೆ ವಿಕ್ರಮನ ಸೈನ್ಯದವರು ಅವನನ್ನು ಹಿಡಿದು ವಿಕ್ರಮನೆದುರಿಗೆ ತಂದರು. ವಿಕ್ರಮನು ಅವನನ್ನು ಕ್ಷಮಿಸಿ ಬಿಟ್ಟು ಕೊಟ್ಟನು. ಮುಂದೆ ಅನೇಕ ವರ್ಷಗಳವರೆಗೆ ವಿಕ್ರಮನು ಶಾಂತಿಯಿಂದ ರಾಜ್ಯವಾಳಿದನು. ಅವನ ಆಳಿಕೆಯ ಕೊನೆಯ ಭಾಗದಲ್ಲಿ ಹೊಯ್ಸಳರ ವಿಷ್ಣು ವರ್ಧನನೆಂಬವನು ಬಂಡಾಯವನ್ನೆಬ್ಬಿಸಿದನು. ಆದರೆ ವಿಕ್ರಮನ ಸರದಾರನಾದ ಅಚ್ಚ ಅಥವಾ ಅಚ್ಚಿಗನೆಂಬವನು ಆ ಬಂಡಾಯವನ್ನು ತಗ್ಗಿಸಿ, ಪಾಂಡ್ಯ, ಕೊಂಕಣ ಮುಂತಾದ ಅರಸರನ್ನು ಮುರಿದನು. ಚೋಳ ಅರಸನ ಕೂಡ ವಿಕ್ರಮನು ಸ್ವಂತ ತಾನೇ ಯುದ್ಧ ಮಾಡಿ ಅವನನ್ನು ಸೋಲಿಸಿದನು, ಆನಂತರ ಕಲ್ಯಾಣಕ್ಕೆ ಬಂದು ವಿಕ್ರಮಪುರವೆಂಬ ತನ್ನ ಹೆಸರಿನದೊಂದು ಪಟ್ಟಣವನ್ನು ಸ್ಥಾಪಿಸಿದನು, ಇವನಿಗೆ ೧೬ ಮಂದಿ ಮಾಂಡಲಿಕ ರಾಜರಿದ್ದರು.
ವೈಭವವರ್ಣನೆಯ (೧೨ ನೆಯ) ಪ್ರಕರಣದಲ್ಲಿ ಕೊಟ್ಟಿರುವೆವು. ಅದನ್ನು ಓದಿ ಯಾವ ಕನ್ನಡಿಗನ ಹೃದಯವು ತಾನೇ ಆನಂದದಿಂದ ಉಕ್ಕೇರುವುದಿಲ್ಲ, ಯಾವನ ಮನಸ್ಸು ತಾನೇ ಅಭಿಮಾನವನ್ನು ತಾಳುವುದಿಲ್ಲ?
ಚಾಲುಕ್ಯ ವಿಕ್ರಮನ ತರುವಾಯ, ಈತನ ಮಗನಾದ ೩ನೆಯ ಸೋಮೇಶ್ವರನು ಪಟ್ಟವೇರಿ ೧೧ ವರ್ಷ ಆಳಿದನು. ಅಷ್ಟರಲ್ಲಿಯೇ ಈತನು ಆಂಧ್ರ, ದ್ರವಿಡ, ಮಗಧ, ನೇಪಾಳ ದೇಶಗಳ ಅರಸರನ್ನು ಗೆದ್ದ ನೆಂದೂ ವಿದ್ವಾಂಸರಿಂದ ಹೊಗಳಲ್ಪಟ್ಟನೆಂದೂ ವರ್ಣನೆಯುಂಟು. ಸೋಮೇಶ್ವರನು ಸ್ವತಃ ಗ್ರಂಥಕರ್ತನು. ಈ ಸೋಮೇಶ್ವರನು ಸಂಸ್ಕೃತದಲ್ಲಿ ಮಾನಸೋಲ್ಲಾಸ, ಅಥವಾ ಅಭಿಲಪಿತಾರ್ಥ ಚಿಂತಾಮಣಿಯೆಂಬ ಒಂದು ರಾಜಕೀಯ ಗ್ರಂಥವನ್ನು ಬರೆದನು. ಅದರಲ್ಲಿ, ರಾಜ್ಯವನ್ನು ಹೇಗೆ ಗಳಿಸಬೇಕು, ಗೆದ್ದ ರಾಜ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು, ಅರಸರು ಎಂತಂತಹ ವಿಲಾಸಗಳನ್ನು ಉಪಭೋಗಿಸಬೇಕು, ಇವೇ ಮೊದಲಾದ ವಿಷಯಗಳೂ ಬೇಟೆ ಮುಂತಾದ ವಿಷಯಗಳೂ ಇರುತ್ತವೆ. ಈತನು ಬಹಳ ವಿದ್ವಾಂಸನಾದುದರಿಂದ ಈತನಿಗೆ 'ಸರ್ವಜ್ಞ ಭೂಪ' ನಂದು ಬಿರುದು.
ಈತನ ತರುವಾಯದ ಅರಸರು ನಿರ್ಬಲರಾಗಿದ್ದುದರಿಂದ ಮಾಂಡಲಿಕ ರಾಜರೇ ಸ್ವತಂತ್ರರಾಗುತ್ತ ಬಂದರು. ೨ನೆಯ ತೈಲಪನ ಕಾಲಕ್ಕೆ ಮಾಂಡಲಿಕ ರಾಜನಾದ ಬಿಜ್ಜಣನೆಂಬವನು, ಕೊಲ್ಲಾಪುರ, ಕಾಕತೇಯ ಮುಂತಾದ ಅರಸರ ಸಹಾಯದಿಂದ, ಚಾಲುಕ್ಯರ ತೈಲಪನನ್ನು ತಳ್ಳಿದನು. ತೈಲಪನು ಕಲ್ಯಾಣವನ್ನು ಬಿಟ್ಟು ಅಣ್ಣಿಗೇರಿಯನ್ನು ರಾಜಧಾನಿಯನ್ನಾಗಿ ಮಾಡಿದನು. ಬಿಜ್ಜಳನು ಅಲ್ಲಿಂದಲೂ ತೈಲಪನನ್ನು ಓಡಿಸಿದುದರಿಂದ, ಅವನು ಬನವಾಸಿಗೆ ಓಡಿದನು. ಚಾಲುಕ್ಯರ ಸಿಂಹಾಸನವನ್ನು ಬಿಜ್ಜಳನ ವಂಶದವರು ಆಕ್ರಮಿಸಿದರು. ಆದರೆ ಆ ವಂಶವೂ ಬಹಳ ದಿವಸ ಬಾಳಲಿಲ್ಲ. ಬೊಮ್ಮನೆಂಬ ಸರದಾರನ ಸಹಾಯದಿಂದ ೪ನೆಯ ಸೋಮೇಶ್ವರನು ಪುನಃ ಕೆಲವು ದಿವಸ ರಾಜ್ಯವಾಳಿದನು. ಆದರೆ ಹೊಯ್ಸಳರು ಪ್ರಬಲರಾಗಿ ಚಾಲುಕ್ಯ ವಂಶವನ್ನು ಮುರಿದರು.