ಶ್ರೀವಿದ್ಯಾರಣ್ಯರ ಇಷ್ಟ ದೇವತೆಯಾದ ಭುವನೇಶ್ವರಿ ಸ್ತುತಿ.
(ಧಾಟಿ – “ಜಯಮೋಹಿನೀ ಮಧುಸೂದನಜಯ” ಎಂಬ ಪದದಂತೆ).
ಜಯ ಜಯ ಜಯ ಭುವನೇಶ್ವರೀ || ಪಲ್ಲ ||
ಜಯ ಭುವನೇಶ್ವರಿ |
ಜಯ ಮಾಹೇಶ್ವರಿ |
ಜಯ ಕೃಪಾಕರೆ ಶುಭಕರೆ ಶ್ರೀಕರೆ || ಅನು ||
ಭೂಸುರಮಾಧವ |
ನಾಶಾ ಪಾಶವ |
ನಾಶಗೊಳಿಸಿ ಸ |
ನ್ಯಾಸಿಯ ಮಾಡಿದೆ ||೧||
ವರ ವಿದ್ಯಾರ |
ಣ್ಯರ ತಪಕೊಲೆದೌ |
ಸುರಿಸಿದೆ ಚಿನ್ನದ |
ಸರಿಯಂ ಧರೆಯೊಳು || ೨ ||
ನೆರೆ ಕನ್ನಡದವರ |
ಸರ ಬೆಳ್ ಜಸಮಂ |
ಧರೆಯೊಳು ಸಲೆ ಸು |
ಸ್ಥಿರಗೊಳಿಸಿದವಳೆ || ೩ ||
ಸಕ್ಕರಿ ಬಾಳಾಚಾರ್ಯ ( ಶಾಂತಕವಿ).
ತಾತ್ಪರ್ಯ:- ಸರ್ವಭಕ್ಷಕನಾದ ಕಾಲನೇ, ಕರ್ನಾಟಕ ವೈಭವವನ್ನು ತಿನ್ನುವಾಗ ನಿನ್ನ ಕಣ್ಣಿಗೆ ಬೀಳದಿದ್ದ ಶಿಲಾಲೇಖ ತಾಮ್ರ ಪಟಗಳನ್ನು ನಾವು ಬಳೆದು ಆರಿಸಿಕೊಂಡು, ಪುನಃ ನೀನು ತಿನ್ನಬಾರದೆಂದು ಕಹಿಪದಾರ್ಥಗಳಿಂದ
ಮಾಡಿದ ಕಾಗದಗಳ ಮೇಲೆ ಕಹಿಯಾದ ಮಸಿಯಿಂದ ಬರೆದಿಡುವೆವು; ನೀನು ತಿನ್ನದಿರು ! ಎಚ್ಚರಿಕೆ ! ಅಥವಾ ಹೀಗೆ ನಿನಗೆ ಹೇಳುವವರು ನಾವೂ ದಡ್ಡರೇ ಸರಿ. ಏಕೆಂದರೆ, ಅವು ನಿನ್ನ ತುತ್ತಿನೊಳಗಿನ ಹರಳುಗಳೆಂದು ನೀನೇ ಅವನ್ನು ಉಗುಳಿರುವೆ. ಇನ್ನು ಆ ಉಚ್ಚಿಹವನ್ನು ನೀನು ತಿನ್ನುವುದು ಹೇಗೆ? ಆದರೆ, ನಾವು ಅವನ್ನು ನಿನ್ನ ಪ್ರಸಾದವೆಂದು ಸ್ವೀಕರಿಸಿ, ನಮ್ಮ ಪೂರ್ವವೈಭವವನ್ನು ಪ್ರತಿಪಾದಿಸುವೆವು.
ಶ, ಷ, ಕನ್ನಡ ನಾಡೊಳು |
ಮುನ್ನಾಳದ ನೃಪ |
ರುನ್ನತವಿಭವಗಳಂ ನೀನು ||
ತಿನ್ನುವ ನಿನ್ನಯ |
ಕಣ್ಣಿಗೆ ಬೀಳದ |
* ಲಿನ್ನು ಮುಳಿದುಕೊಂಡಿರುತಿರ್ದ ||೧||
ಶಿಲಾಲೇಖಗಳ |
ಸಲೆ ತಾಮ್ರದ ಸಟ |
ಗಳ ಪಾಳ್ ದೇಗುಲಗೊಂಬೆಗಳ ||
ಹಳೇ ಗ್ರಂಥಗಳ |
ǂ ಪೊಳಲ್ ಗುರುಹುಗಳ |
ಬಳೆದಾರಿಸಿ ಕೊಂಡಾವೀಗ || ೨ ||
ಬಲು ಕಹಿ ವಸ್ತುಗ |
ಳೊಳಕೊಂಡೋಲೆಕ
ಳೊಳು ಕಹಿಯಾಗಿಹ ಮಸಿಯಿಂದ ||
ಸಲೆ ನಿನ್ನಯ ಕೃತಿ |
ಗಳ ಗುರುಮಹಿಮಾ |
ವಳಿಗಳನ್ನು ಬರೆದಿಡುತಿಹೆವು || ೩ ||
- *ಇನ್ನು=ಉಳಿದು, ǂ ಪೊಳಲ್ ಗುರುಹು= ಪಟ್ಟಣದ ಕುರುಹು. ೧೬೦ಕರ್ನಾಟಕ ಗತವೈಭವ
- *ಇನ್ನು=ಉಳಿದು, ǂ ಪೊಳಲ್ ಗುರುಹು= ಪಟ್ಟಣದ ಕುರುಹು.
ಎಲವೊ ಕಾಲ! ಭರ |
ದೊಳುಂಬ ಸಮಯದೊ |
ಳುಳಿ ನೆನಪಿಂದಿವುಗಳನು ಗಡ ||
ಪಳ ವಿಶ್ರಾಂತಿಯ |
ಗೊಳದೆ ಸಿಕ್ಕುದಂ |
ಮೆಲುವಿ ಮೊದಲೆ ತಿಳಿಸಿಹೆವಾವು || ೪ ||
ಎಂದೊರೆವುದು ಮತಿ |
ಮಂದತೆಯದು ನೀ |
ನಂದುಣ್ಣುವ ತುತ್ತುಗಳೊಳಗೆ ||
ಬಂದವುಗಳ ಹರ |
ಳೆಂದುಗುಳಿದೆಯ |
ನೆಂದುಮಲ್ಲ ನಿನಗವು ಗ್ರಾಹ್ಯಂ||೫||
ಸಕಲದೇವತಾ |
ನಿಕರಶಿಖರ! ತವ |
ಸುಖದುಚ್ಚಿಷ್ಟಂ ಲಭಿಸುವದು ||
ಸುಖಪ್ರಸಾದದ |
ಶಕುನವೆಂದು ನಾವ್ |
ಕಕುಲತೆಯಿಂ ಸ್ವೀಕರಿಸವದಂ|| ೬ ||
ಈ ಪ್ರಸಾದಬಲ |
* ದಪ್ರತಿಮತಯಂ |
ಕ್ಷಿಪ್ರದಿ ನೆರೆ ನಾಡಿಗರಂತೆ||
ಸುಪ್ರಸಿದ್ಧ ಪೂ !
ರ್ವ ǂ ಪ್ರಬಂಧಗಳ |
ನು + ಪ್ರತಿಪಾದಿಸುವೆವು ನಾವು||೭||
- * ಅಪ್ರತಿಮತ, ǂ ಕಥೆ, + ನಿಶ್ಚಯದಿಂದ ಹೇಳು. ಸರ್ವಭಕ್ಷಕನಾದ ಕಾಲನಿಗೆ ಪ್ರಾರ್ಥನೆ೧೬೧
- * ಅಪ್ರತಿಮತ, ǂ ಕಥೆ, + ನಿಶ್ಚಯದಿಂದ ಹೇಳು.
ತಿಳಿಯುವ† ವಿದರಿಂ |
ಸಲೆ ಪೂರ್ವದ ಸೂ |
ಜ್ವಳ ಸಾಹಸಶೌರ್ಯಾದಿಗಳು ||
ನೆಲದೊಡೆಯರ ಬಲು |
ಬೆಳೆದ ವಿಭವಗಳು |
ಕಲಾವಂತರತಿ ಕುಶಲತೆಯು || ೮ ||
ಅಭೀಷ್ಟ ಸಾಧನ |
ದಭಿಮಾನಂ ಮೇಣ್ |
ಅಭೀರುತನದುತ್ಕರ್ಷತೆಯು ||
+ ಆಭರೂಪರ ಸು|
§ ಪ್ರಭವಫಲಂಗಳ |
* ಪ್ರಬೋಧನಗಳಿಗಿನ ಜನಕೆ|| ೯ ||
ಇವುಗಳ ಗುಣಗಳು |
ಭುವನವಿದಿತಮಾ |
ಗಿವೆ ಕಾಲಾಂತರದಿಂದಲಿವು ||
ತವೆ ನಿಕೃಷ್ಟ ದೇ |
ಶವನುದ್ಧರಿಸುವ |
ರವತರಿಸುವವೊಲು ಮಾಡುವವು|| ೧೦ ||
-ಬಾಳಾಚಾರ್ಯ ಸಕ್ಕರಿ (ಶಾ೦ತಕವಿ).
- +ಪ೦ಡಿತ, §ಪ್ರಭವ=ಜ್ಞಾನ, *ಎಚ್ಚರಿಕೆ ಹೇಳೋಣ.