ಕರ್ಮದ ಗಡಣ ಹಿಂಗಿದುವಿಂದು ಪಾಪದ ಬಲೆ ಬಳಸಿ ಹೋದವು. ಬಲ್ಲೆನು ಈ ಸಂಸಾರದಲ್ಲಿ ನೊಂದು ಬೆಂದೆನಾಗಿ ಮಾಯೆಯ ತಲೆಯ ಮೆಟ್ಟಿ ಹೋದೆನು. ಇನ್ನು ಮರಳಿ ಬಾರೆನು ಗುಹೇಶ್ವರಾ ನಿಮ್ಮಾಣೆ