ಕರ್ಮ ಸೆರಗ ಹಿಡಿದವರೇಕೆ ಬಿಟ್ಟಪೆ ತಂದೆ. ಕರ್ಮ ಘಾಯ [ಇ]ಮ್ಮೈಗೊಂಡು ನೊಂದೆ ನೋಡಯ್ಯ. ನಿಮ್ಮ ನಂಬಿದ ನಚ್ಚಿಹ ಮಗಳ ಬೆಂಬಿಟ್ಟರೆ ಎಂತು ಬದುಕುವೆನಯ್ಯ ಚೆನ್ನಮಲ್ಲಿಕಾರ್ಜುನಾ ?