ಕಲ್ಪಿತಾಂತರವನುಂಬುದು ಕಾಯವೋ? ಜೀವವೋ ಜೀವವೆಂದಡೆ ನಿರ್ನಾಮ ಭೇದ ಕಾಯವೆಂದಡೆ ಮೃತ ಅಚೇತನ ಘಟ. ಉಭಯಸಂಗ ಸಂಬಂಧವಾದಲ್ಲಿ ಎನ್ನಯ್ಯ ಚೆನ್ನರಾಮ ಭೇದ.