ಕಲ್ಪಿಸಿ ಅರ್ಪಿಸಲಿಲ್ಲ ಭೋಗಿಸಲಿಲ್ಲ ಅರ್ಪಿತ ಅನರ್ಪಿತವೆಂಬೆರಡನಳಿದನಾಗಿ. ಕಾಯದ ಕೈಗಳ ಕೈಯೆ ಭಾವದ ಕೈಗಳ ಕೈಯೆ ಅರ್ಪಿಸುವನಲ್ಲ ! ಆತ ಅರ್ಪಿತ ತಾನಾಗಿ. ಅರ್ಪಿತ ಅನರ್ಪಿತವೆಂಬ ಸಂದೇಹವಳಿದುಳಿದನು. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ ಪ್ರಸಾದವೆ ಪ್ರಳಯವಾಯಿತ್ತು !