ಕಸನೀರ ತರುವ ದಾಸಿಗೆ ಒಂದು ಶಿಶು ಹುಟ್ಟಿತ್ತು ನೋಡಾ. ಶಿಶುವೆದ್ದು ತಾಯನಪ್ಪಲು ಕಸನೀರು ಅರತುಹೋಯಿತ್ತು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.