ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ ! ಘನಕ್ಕೆ ಘನವಾದ ವಸ್ತು; ತಾನೆ ಗುರುವಾದ ತಾನೆ ಲಿಂಗವಾದ ತಾನೆ ಜಂಗಮವಾದ ತಾನೆ ಪ್ರಸಾದವಾದ ತಾನೆ ಮಂತ್ರವಾದ ತಾನೆ ಯಂತ್ರವಾದ ತಾನೆ ಸಕಲವಿದ್ಯಾರೂಪನಾದ._ ಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದ. ಇನ್ನು ನಿರ್ವಿಕಾರ ಗುಹೇಶ್ವರ.