ಕಾಣದುದ ಕಂಡೆ ಕೇಳದುದ ಕೇಳಿದೆ_ ಮುಟ್ಟಬಾರದುದ ಮುಟ್ಟಿದ ಅಸಾಧ್ಯವ ಸಾಧಿಸಿದ ತಲೆಗೆಟ್ಟುದ ತಲೆವಿಡಿದ ನೆಲೆಗೆಟ್ಟುದ ನಿರ್ಧರಿಸಿದ. ಗುಹೇಶ್ವರಾ ನಿಮ್ಮ ಶರಣ ಅಜಗಣ್ಣಂಗೆ ಶರಣೆಂದು ಶುದ್ಧನಾದೆನು.