ಕಾಣಬಾರದ ಗುರು ಕಣ್ಗೆ ಗೋಚರವಾದಡೆ;_ ಹೇಳಲಿಲ್ಲದ ಬಿನ್ನಪ್ಪ ಮುಟ್ಟಲಿಲ್ಲದ ಹಸ್ತಮಸ್ತಕಸಂಯೋಗ. ಹೂಸಲಿಲ್ಲದ ವಿಭೂತಿಯ ಪಟ್ಟ ಕೇಳಲಿಲ್ಲದ ಕರ್ಣಮಂತ್ರ. ತುಂಬಿ ತುಳುಕದ ಕಲಶಾಭಿಷೇಕ ಆಗಮವಿಲ್ಲದ ದೀಕ್ಷೆ ಪೂಜೆಗೆ ಬಾರದ ಲಿಂಗ ಸಂಗವಿಲ್ಲದ ಸಂಬಂಧ. ಸ್ವಯವಪ್ಪ ಅನುಗ್ರಹ ಅನುಗೊಂಬಂತೆ ಮಾಡಾ ಗುಹೇಶ್ವರಾ.