ಕಾಣಬಾರದ ಘನವ ಕರದಲ್ಲಿ ಧರಿಸಿದ ಹೇ?ಬಾರದ ಘನವ ಮನದಲ್ಲಿ ತೋರಿದ ಉಪಮಿಸಬಾರದ ಘನವ ನಿಮ್ಮ ಶ್ರೀಪಾದದಲ್ಲಿ ತೋರಿದ ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ ಬಸವಣ್ಣ ತೋರಿಕೊಟ್ಟನಾಗಿ ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ