ಕಾಮದಿಂದ ಕರಗನು, ಕ್ರೋಧದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕಾಮದಿಂದ ಕರಗನು
ಕ್ರೋಧದಿಂದ ಕೊರಗನು. ಲೋಭ ಮೋಹಂಗಳಿಂದತಿ ನೋವನಲ್ಲ ನೋಡಾ
ಭಕ್ತನು. ಮದ ಮತ್ಸರಗಳಿಂದ ಬೆದಬೆದನೆ ಬೇವವನಲ್ಲ; ಅಹಂಕಾರ ಮಮಕಾರಗಳಿಂದ ಮತಿಮಂದನಲ್ಲ ನೋಡಾ
ಭಕ್ತನು ಆಕಾರ ನಿರಾಕಾರ ಏಕವಾದ ಏಕಮೇವ ಪರಬ್ರಹ್ಮವು ತಾನೇ ನೋಡಾ
ಭಕ್ತನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.