ಕಾಮನ ಕೊಲುವಲ್ಲಿ ಹೋಮವ ಸುಡುವಲ್ಲಿ ತ್ರಿಪುರಸಂಹಾರದ ಕೀಲನರಿವಲ್ಲಿ ಆತನ `ಯೋಗಿ' ಎನಬೇಡ ಆತನ `ಭೋಗಿ' ಎನಬೇಡ ಆತನೆ ಅಚ್ಚಲಿಂಗೈಕ್ಯನು ! ಹಸಿವ ಮರೆದಲ್ಲಿ ವ್ಯಸನವರತಲ್ಲಿ ಗುಹೇಶ್ವರಲಿಂಗವು ಸಿದ್ಧರಾಮಯ್ಯದೇವರು ತಾನೆ !