Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ಕಾಮನ ತಲೆಯ ಕೊರೆದು
ಕಾಲನ ಕಣ್ಣ ಕಳೆದು
ಸೋಮ ಸೂರ್ಯರ ಹುರಿದು ಹುಡಿಮಾಡಿ ತಿಂಬವಳಿಂಗೆ ನಾಮವನಿಡಬಲ್ಲವರಾರು ಹೇಳಿರೆ! ನೀ ಮದವಳಿಗನಾಗೆ ನಾ ಮದವಳಿಗಿತ್ತಿಯಾಗೆ ಯಮನ ಕೂಡುವ ಮರುತನಂತೆ ನೋಡಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.