ಕಾಮವ ಸುಟ್ಟು ಹೋಮವನುರುಹಿ ತ್ರಿಪುರಸಂಹಾರದ ಕೀಲ ಬಲ್ಲಡೆ ಯೋಗಿಯಾದಡೇನು ? ಭೋಗಿಯಾದಡೇನು ? ಶೈವನಾದಡೇನು ? ಸನ್ಯಾಸಿಯಾದಡೇನು ? ಅಶನವ ತೊರೆದಾತ ವ್ಯಸನವ ಮರೆದಾತ_ ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು.