ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ ವ್ರತಗೇಡಿ ವಿಷ್ಣುವೆಂಬವ ಸತ್ತು ಬಿದ್ದ ರುದ್ರನೆಂಬವ ಅಬದ್ಧಅವಿಚಾರಿ! ಅವಿಚಾರದಲ್ಲಿ ಎಲ್ಲರ ಕೊಂದ ಕೊಲೆ ನಿಮ್ಮ ತಾಗುವುದು ಗುಹೇಶ್ವರಾ.