ಕಾಯಕಲ್ಪಿತಕ್ಕೆ ಲಿಂಗೈಕ್ಯನು. ದೂರನು



Pages   (key to Page Status)   


ಕಾಯಕಲ್ಪಿತಕ್ಕೆ ದೂರನು ನೋಡಾ ಲಿಂಗೈಕ್ಯನು. ಕರ್ಮವಿರಹಿತನು ನೋಡಾ ಲಿಂಗೈಕ್ಯನು. ಸೋಲುಗೆಲ್ಲಕ್ಕೆ ಹೋರುವನಲ್ಲ ನೋಡಾ ಲಿಂಗೈಕ್ಯನು. ಶೀಲ ವ್ರತ ನೇಮದ ಸೀಮೆಯ ಮೆಟ್ಟಿ ನಡೆವನಲ್ಲ ನೋಡಾ ಲಿಂಗೈಕ್ಯನು. ಅಖಂಡೇಶ್ವರಾ
ನಿಮ್ಮ ನಿಜಲಿಂಗೈಕ್ಯನ ಘನವ ನೀವೇ ಬಲ್ಲಿರಿ.