ಕಾಯಗೊಂಡು ಹುಟ್ಟಿದವರು; ದೇವರಾದಡಾಗಲಿ ಈವರಾದಡಾಗಲಿ ಮಾಯೆಯ ಸಾಧಿಸಿ ಗೆಲುವದರಿದು ನೋಡಾ ! ಮನದ ತಮಂಧವ ಗೆಲಿದು
ನೆನೆದು ಸುಖಿಯಾದೆಹೆನೆಂಬವರ ಬೆಂಬತ್ತಿ ಕಾಡಿತ್ತು ಕರ್ಮ. ಗುಹೇಶ್ವರಲಿಂಗವ ಕಿರಕಿರಿದಾಗಿ ನೆನೆದಡೆ ಹಿರಿಹಿರಿದಾಗಿ ಕಾಡುವುದು ನೋಡಾ ಮರಹು ! ಸಂಗನಬಸವಣ್ಣಾ ನೀ ನೆನೆದ ನೆನಹು ಆರಂತಹುದೂ ಅಲ್ಲ ನೋಡಾ.