ಕಾಯದಲಾದ ಮೂರ್ತಿಯಲ್ಲ
ಜೀವದಲಾದ ಮೂರ್ತಿಯಲ್ಲ
ಪ್ರಾಣದಲಾದ ಮೂರ್ತಿಯಲ್ಲ
ಪುಣ್ಯದಲಾದ ಮೂರ್ತಿಯಲ್ಲ
ಮುಕ್ತಿಯಲಾದ ಮೂರ್ತಿಯಲ್ಲ
ಯುಗದಲಾದ ಮೂರ್ತಿಯಲ್ಲ
ಜುಗದಲಾದ ಮೂರ್ತಿಯಲ್ಲ
ಇದೆಂತಹ ಮೂರ್ತಿಯೆಂದುಪಮಿಸುವೆ ? ಕಾಣಬಾರದ ಕಾಯ ನೋಡಬಾರದ ತೇಜ
ಉಪಮಿಸಬಾರದ ನಿಲವು. ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು ಏನೆಂದು ಹೇಳುವೆ ಗುಹೇಶ್ವರಾ ?