ಕಾಯದಲ್ಲಿ ಲಿಂಗೈಕ್ಯವೇ ? ಅಲ್ಲ. ಜೀವದಲ್ಲಿ ಲಿಂಗೈಕ್ಯವೇ ? ಅಲ್ಲ. ಭಾವದಲ್ಲಿ ಲಿಂಗೈಕ್ಯವೇ ? ಅಲ್ಲ. ಇಂತೀ ತ್ರಿವಿಧ ಲಿಂಗೈಕ್ಯವೇ ? ಅಲ್ಲ. ಮತ್ತೆಯೂ ಲಿಂಗೈಕ್ಯವೇ ಬೇಕು ಕೂಡಲಚೆನ್ನಸಂಗಮದೇವಾ.