ಕಾಯದೊಳಗಣ ಮನಸ್ಸು ಕಂಗೆಟ್ಟು ಹೊರಬಿದ್ದು ಕರಣೇಂದ್ರಿಯಂಗಳನೆ ಕೂಡಿ ಆಯಾಸಂಗೊಂಡು ಧಾವತಿಯಿಂದೆ ಸಾಯುತಿರ್ಪುದು ನೋಡಾ ಜಗವೆಲ್ಲ. ಆ ಕಾಯದ ಕಳವಳ ಹಿಂಗಿ ಮನವು ಮಹಾಘನದಲ್ಲಿ ಅಡಗಲು ಸಾವು ತಪ್ಪಿತ್ತು ನೋಡಾ ಅಖಂಡೇಶ್ವರಾ.