ಕಾಯದೊಳಗೆ ಕಾಯವಾಗಿ
ಪ್ರಾಣದೊಳಗೆ ಪ್ರಾಣವಾಗಿ
ಮನದೊಳಗೆ ಮನವಾಗಿ ಭಾವದೊಳಗೆ ಭಾವವಾಗಿ ಅರಿವಿನೊಳಗೆ ಅರಿವಿನ ತಿರುಳಾಗಿ
_ಮರಹು ಮಾರಡೆಯಿಲ್ಲದೆ. ನಿಜಪದವು ಸಾಧ್ಯವಾದ ಬಳಿಕ ಆವುದು ವರ್ಮ
ಆವುದು ಕರ್ಮ ? ಆವುದು ಬೋಧೆ
ಆವುದು ಸಂಬಂಧ ? ನಾ ಹೇಳಲಿಲ್ಲ ನೀ ಕೇಳಲಿಲ್ಲ ! ಅದೇನು ಕಾರಣವೆಂದಡೆ ಬೆಸಗೊಂಬಡೆ ತೆರಹಿಲ್ಲವಾಗಿ ! ಗುಹೇಶ್ವರಲಿಂಗದಲ್ಲಿ ತೆರೆಮರೆ ಆವುದು ಹೇಳಯ್ಯಾ ಬಸವಣ್ಣಾ ?