ಕಾಯದ ಕಳವಳದಲ್ಲಿ ಹುಟ್ಟಿ ಸಂಸಾರವನೆ ವೇಧಿಸಿ ವಿಷಯಂಗಳ ಕೊಂಡಾಡುವರಂತಿರಲಿ. ಬ್ರಹ್ಮಜ್ಞಾನವನೆ ಪೂರಯಿಸಿ ಭಾವವಂತರೆನಿಸಿ ಲಿಂಗ ಮುಖವರಿಯದವರಂತಿರಲಿ. ತನುವ ತೊರೆದು [ಮನೋಮಧ್ಯದೊಳಗೆ] ಕಾಲವಂಚಕರಾದವರಂತಿರಲಿ ಕೂಡಲಚೆನ್ನಸಂಗಯ್ಯನ ನಿಲವನರಿಯದ ಅಂಗರುಚಿಗಳವರಂತಿರಲಿ.