ಕಾಯದ ಕಾರ್ಪಣ್ಯವರತಿತ್ತು ಕರಣಂಗಳ ಕಳವಳವಳಿದಿತ್ತು. ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು. ಇನ್ನೇವೆನಿನ್ನೇವೆನಯ್ಯಾ ? ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ ಬಯಕೆ ಬಯಲಾಗದು. ಇನ್ನೇವೆನಿನ್ನೇವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?