ಕಾಯವಿಕಾರ ಕಾಡಿಹುದಯ್ಯಾ ಮನೋವಿಕಾರ ಕೂಡಿಹುದಯ್ಯಾ. ಇಂದ್ರಿಯ ವಿಕಾರ ಸುಳಿವುದಯ್ಯಾ ! ಸುಳುವಿನೊಳಗೆ ಸುಳಿವುತ್ತಲಿದ್ದೇನೆ ಸಿಲುಕಿಸದಿರಯ್ಯಾ ! ಅನ್ಯ ಚಿತ್ತದಲ್ಲಿರಿಸದಿರಯ್ಯಾ ನಿಮ್ಮ ಚಿತ್ತದಲ್ಲಿರಿಸಯ್ಯಾ. ಅನುಪಮಸುಖಸಾರಾಯ ಶರಣರಲ್ಲಿ- ಕೂಡಲಸಂಗಮದೇವಯ್ಯಾ ಇದನೆ ಬೇಡುವೆನಯ್ಯಾ. 48