ಕಾಯವಿಲ್ಲದ ಭಕ್ತ ಜೀವವಿಲ್ಲದ ಭಕ್ತ. ಮಾಯೆಯಿಲ್ಲದ ಭಕ್ತ ಮರಹಿಲ್ಲದ ಭಕ್ತ ಅರುಹಿಲ್ಲದ ಭಕ್ತ. ಒಳಗಿಲ್ಲದ ಭಕ್ತ ಹೊರಗಿಲ್ಲದ ಭಕ್ತ. ತಾನಿಲ್ಲದ ಭಕ್ತ ಇದಿರಿಲ್ಲದ ಭಕ್ತ. ತಾನಿದಿರೆಂಬುವುದೇನುಯೇನೂಯಿಲ್ಲದ ಪರಮನಲ್ಲಿ ಬೆರಸಿ ಬೇರಿಲ್ಲದ ಪರಮಭಕ್ತನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.