ಕಾಯವೆ ಕಡವಸವಾಗಿ ಮನವೆ ಯೋಗವಟ್ಟಿಗೆಯಾಗಿ; ಇಂದ್ರಿಯವಿಸಂಚದಿಂದಾದ ಉಪಮೆಯಯ್ಯಾ ! ಏನೆಂದೆನಬಹುದು ? ಎಂತೆಂದೆನಬಹುದು ? ಸುಖದ ಸೋಂಕಿನಲಾದ ಸಮಾಧಿಯಯ್ಯಾ ! ಅಂತರಂಗದ ಕಂಥೆ ಚಿಂತೆಗೆಟ್ಟುದು ಬ್ರಹ್ಮ ಗುಹೇಶ್ವರಲಿಂಗದಲ್ಲಿ ಸಂಗವಯ್ಯಾ.