ಕಾಯ ಒಂದು ಪ್ರಾಣ ಒಂದು ಭಾವ ಒಂದು ನಿರ್ಭಾವ ಒಂದು ಒಂದಲ್ಲದೆ ಎರಡುಂಟೆ ? ಗುರು ಒಂದು ಲಿಂಗ ಒಂದು ಉಪದೇಶ ಒಂದು. ಕೂಡಲಚೆನ್ನಸಂಗಯ್ಯನ ಶರಣ ಬಸವಣ್ಣನ ಗರುಡಿಯಲ್ಲಿ ಇಬ್ಬರಿಗೆಯೂ ಅಭ್ಯಾಸ ಒಂದೆ ಕಾಣಾ ಪ್ರಭುವೆ