ಕಾಯ ಲಿಂಗವ ಮುಟ್ಟಿದರೆ ಕಾಯ ಲಿಂಗಭಕ್ತನಾಗಿರಬೇಕು. ನಯನ ಲಿಂಗವ ಮುಟ್ಟಿದರೆ ನಯನ ಲಿಂಗಭಕ್ತನಾಗಿರಬೇಕು. ಶ್ರೋತ್ರ ಲಿಂಗವ ಮುಟ್ಟಿದರೆ ಶ್ರೋತ್ರ ಲಿಂಗಭಕ್ತನಾಗಿರಬೇಕು. ಭಾವ ಲಿಂಗವ ಮುಟ್ಟಿದರೆ ಭಾವ ಲಿಂಗಭಕ್ತನಾಗಿರಬೇಕು. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಸರ್ವಜೀವದಯಾಪಾರಿಯಾಗಿರಬೇಕು.