ಕಾಯ ಲಿಂಗೈಕ್ಯವೆ ? ಅಲ್ಲ ನಿಲ್ಲು. ಜೀವ ಲಿಂಗೈಕ್ಯವೆ ? ಅಲ್ಲ ನಿಲ್ಲು. ಕಾಯದ ಜೀವದ ಸಂದ ಬಲ್ಲಡೆ_ಆತ ಲಿಂಗೈಕ್ಯ. ಒಂಬತ್ತು ದ್ವಾರಮಂ ಕಳೆದು ಹತ್ತನೆಯ ದ್ವಾರದಲ್ಲಿ ನಿಲಬಲ್ಲಡೆ ಆತನೆ ಗುರು ಕಾಣಾ ಗುಹೇಶ್ವರಾ.