ಕಾಲವ್ಯಾಘ್ರನ ಶಿರವನೊಡೆದು ಜ್ವಾಲಾಮುಖ ಗಣೇಶ್ವರನುದಯವಾಗಿ ಕಾಲ ಕಾಮ ಮಾಯಾದಿಗಳ ಮರ್ದಿಸಿ ಲಿಂಗಲೀಲೆಯಿಂದವೋಲಾಡುತಿದಾನೆ ನೋಡಾ. ಆ ಜ್ವಾಲಾಮುಖ ಗಣೇಶ್ವರನನು ಉರಿಲಿಂಗವೆಯ್ದಿ ನುಂಗಿದ್ದ ಕಂಡು ನಾನು ಲಿಂಗೈಕ್ಯನಾದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.