ಕಾವಿ ಕಾಷಾಯಾಂಬರ ಜಡೆಮಾಲೆಯ ಧರಿಸಿದರೇನು ಜಂಗಮವಾಗಬಲ್ಲನೆ ? ಸಾಕಾರದಲ್ಲಿ ಸನುಮತರಲ್ಲ ನಿರಾಕಾರದಲ್ಲಿ ನಿರುತರಲ್ಲ. ತುರುಬು ಜಡೆ ಬೋಳೆನ್ನದೆ ಅರಿವುಳ್ಳಾತನೆ ಜಂಗಮ. ಅರಿವಿಲ್ಲದೆಲ್ಲ ವೇಷ ಕಾಣಾ ಕೂಡಲಚೆನ್ನಸಂಗಮದೇವಾ