ಕಾಷ್ಠದಲ್ಲಿ ಬೊಂಬೆಯ ಮಾಡಿ
ಪಟ್ಟುನೂಲ ಸೂತ್ರವ ಹೂಡಿ
ತೆರೆಯ ಮರೆಯಲ್ಲಿ ನಿಂದು
ಸೂತ್ರಿಕನು ಕುಣಿಸಿದಡೆ ಕುಣಿಯುತಿರ್ಪುದಲ್ಲದೆ ಆ ಅಚೇತನ ಬೊಂಬೆ ತನ್ನ ತಾನೆ ಕುಣಿವುದೆ ಅಯ್ಯಾ ? ಎನ್ನ ತನುವೆಂಬ ಅಚೇತನ ಬೊಂಬೆಗೆ ಪ್ರಾಣವಾಯುವೆಂಬ ಜೀವಸೂತ್ರವ ಹೂಡಿ ಮನವೆಂಬ ತೆರೆಯ ಮರೆಯಲ್ಲಿ ನಿಂದು ನೀನಾಡಿಸಿದಡೆ ನಾನಾಡುತಿರ್ಪೆನಲ್ಲದೆ ಎನಗೆ ಬೇರೆ ಸ್ವತಂತ್ರವೆ ಹೇಳಾ ಅಖಂಡೇಶ್ವರಾ ?