ಕಿವಿಯಿಂದ ಕೇಳಿದುದು ಕಣ್ಣಿಂದ ಕಂಡುದು ಘ್ರಾಣದಿಂದ ಘ್ರಾಣಿಸಿದುದು ಜಿಹ್ವೆಯಿಂದ ಭುಂಜಿಸಿದುದು ಸ್ಪರ್ಶದಿಂದ ಮುಟ್ಟಿದುದು ತೃಪ್ತಿಯಿಂದ ಪರಿಣಾಮಿಸಿದುದು ಲಿಂಗವೆಂದೆಂಬುದು ಸಹವರ್ತಿಯೆನಿಸಿಕೊಂಬುದು. ಒಂದಕೊಂದು ಪ್ರಾಣ ಒಂದನೊಂದು ಕೂಡಿಹುದು ತಂದೆ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.