ಕಿಸುಕುಳದ ಕೀವುರಕ್ತದ ಒಸೆದು ತುಂಬಿದ ಮಲಮೂತ್ರದ ರಂಜನ ಮುಸುಕಿದ ಮಾಂಸ ಅಸ್ಥಿಗಳ ಸುತ್ತಿನ ಹಸನಾದ ಚರ್ಮದ ಹೊದಿಕೆಯ ಹುಸಿಯ ತನುವ ಮೆಚ್ಚಿ ಪಶುಪತಿ ನಿಮ್ಮ ನಾನು ಮರೆದೆನಯ್ಯ ಅಖಂಡೇಶ್ವರಾ.