ಕುರುಹು ಉಂಟೇ ಮರುಳೆ ಲಿಂಗಕ್ಕೆ ? ತೆರಹು ಉಂಟೇ ಮರುಳೆ ಲಿಂಗಕ್ಕೆ ? ಎಲ್ಲೆಡೆಯೊಳು ಪರಿಪೂರ್ಣವಾದ ಪರಾತ್‍ಪರಲಿಂಗದ ನಿಲವನರಿಯದೆ ಹುಸಿಯನೆ ಕಲ್ಪಿಸಿ ಹುಸಿಯನೆ ಪೂಜಿಸಿ ಹುಸಿಯ ಫಲಪದವನುಂಡು ಹುಸಿಯಾಗಿ ಹೋದವರ ಕಂಡು ನಸುನಗುತಿಪ್ಪನಯ್ಯ ನಮ್ಮ ಅಖಂಡೇಶ್ವರನು.