ಕುಲ
ಚಲ
ಮೊದಲಾದ
ಅಷ್ಟಮದಂಗಳನರಿತು
ದಾಸೋಹಕ್ಕೆಡೆಯಾಗಿರಬೇಕು.
ಪೃಥುವ್ಯಾದಿ
ಅಷ್ಟತನುಮದವೆಂಬ
ಮಹಿಮೆಯೊಳಗಿರ್ದು
ಲಿಂಗಾವಧಾನಿಯಾಗಿರಬೇಕು.
ತೈಲಾಭ್ಯಂಜನ
ವಸ್ತ್ರ
ಆಭರಣ
ಸುಗಂಧದ್ರವ್ಯ
ಷಡುರಸಾನ್ನಾದಿ
ಸತಿಸಂಗ
ಸುಖ
ದುಃಖಗಳ
ಲಿಂಗಮುಖ
ಮುಂತಾಗಿ
ಪ್ರಸಾದಭೋಗಿಯಾಗಿರ್ಪುದು.
ಯಮ
ನಿಯಮಾದಿ
ಅಷ್ಟಾಂಗ
ಯೋಗದಲ್ಲಿ
ನಿರತನಾದಡೇನು
?
ದಾಸೋಹಕ್ಕೆ
ಸ್ವಯವಾಗಿರಬೇಕು.
ಗೃಹ
ಅರಮನೆ
ತೋಟ
ಗೋಕುಲ
ವಾಹನ
ಪರಿಜನ
ಕೀರ್ತಿಜನದೊಳಗಿರ್ದು
ಶರಣರ
ಮರೆದಿರಲಾಗದು.
ಇಂದ್ರಾದಿ
ದೇವತೆಗಳು
ಅಷ್ಟದಿಕ್ಕಿನಲ್ಲಿ
ಕರ್ತರಾಗಿ
ನಿಮ್ಮ
ನಿಜ
ಭೃತ್ಯರಾಗಿರ್ದರು.
ಇಂತೀ
ಅಷ್ಟಸಂಪಾದನೆ
ನಾಲ್ವತ್ತೆಂಟರಿಂದ
ಕೂಡಲಚೆನ್ನಸಂಗಯ್ಯನ
ಶರಣರು
ಲೋಕಾಧಿಪತಿಗಳು