ಕೃತಯುಗದಲ್ಲಿ ಓಂಕಾರಸತ್ಯರೂಪದೇವಾಂಗನೆಂಬ ಭಕ್ತನ ಮಾಡುವಲ್ಲಿ ಸ್ಥೂಲಕಾಯನೆಂಬ ಜಂಗಮ
ಅಂದಿಗೆ ಪ್ರಥಮಮೂಲಸ್ಥಾನ ಕೇತಾರೇಶ್ವರ. ತ್ರೇತಾಯುಗದಲ್ಲಿ ಘಂಟಾಕರ್ಣನೆಂಬ ಭಕ್ತನ ಮಾಡುವಲ್ಲಿ
ಶೂನ್ಯಕಾಯನೆಂಬ ಜಂಗಮ
ಅಂದಿಗೆ ಪ್ರಥಮಮೂಲಸ್ಥಾನ ರಾಮೇಶ್ವರ. ದ್ವಾಪರದಲ್ಲಿ ವೃಷಭನೆಂಬ ಭಕ್ತನ ಮಾಡುವಲ್ಲಿ
ಅನಿಮಿಷನೆಂಬ ಜಂಗಮ
ಅಂದಿಗೆ ಪ್ರಥಮಮೂಲಸ್ಥಾನ ¸õ್ಞರಾಷ್ಟ್ರ. ಕಲಿಯುಗದಲ್ಲಿ ಬಸವನೆಂಬ ಭಕ್ತನ ಮಾಡುವಲ್ಲಿ ಪ್ರಭುವೆಂಬ ಜಂಗಮ
ಅಂದಿಗೆ ಪ್ರಥಮಮೂಲಸ್ಥಾನ ಶ್ರೀಶೈಲ. ಇಂತೀ ನಾಲ್ಕು ಯುಗಕ್ಕೆ ನಾಲ್ಕು ಜಂಗಮಸ್ಥಲ
ನಾಲ್ಕು ಯುಗಕ್ಕೆ ನಾಲ್ಕು ಲಿಂಗ (ಭಕ್ತ?) ಸ್ಥಲ ಕೂಡಲಚೆನ್ನಸಂಗಮದೇವಾ.