ಕೆಡೆ ನಡೆಯದೆ ಕೆಡೆ ನುಡಿಯದೆ ಅನ್ಯರ ಪ್ರತಿಪಾದಿಸದಿದ್ದಡೆ ಏನ ಮಾಡನಯ್ಯಾ ಲಿಂಗವು ಏನ ಕೊಡನಯ್ಯಾ ತಾನು ಏನ ಬೇಡಿದುದನೀವನಾಗಿ ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ ಕೂಡಲಸಂಗಮದೇವಾ. 236