ಜನಪದ ಸಾಹಿತ್ಯದಲ್ಲಿ ತ್ಯಾಗ,ಬಲಿದಾನದ ಕಥನಗೀತೆಗಳು ಹೇರಳವಾಗಿ ದೊರೆಯುತ್ತವೆ. ಅದರಲ್ಲೂ ಬಾವಿ, ಕೆರೆ, ಕಟ್ಟೆ, ಕೋಟೆ, ಕೊತ್ತಲಗಳನ್ನು ಕಟ್ಟಿಸುವ ಸಂಧರ್ಭದಲ್ಲಿ ಬಲಿಯಾದ ಜೀವಗಳಿಗೆ ಲೆಕ್ಕವೇ ಇಲ್ಲ. ಊರಿನ ಹಿತಕ್ಕಾಗಿ , ಸಮಷ್ಠಿಯತೆಯ ಒಳಿತಿಗಾಗಿ ಬಲಿಯಾದವರನ್ನು ದೇವರಂತೆ ಪೂಜಿಸುವ ಪದ್ದತಿ ಜನಪದರಲ್ಲಿದೆ. ಹಾಗಾಗಿ ಎಂಟು ಜನ ಮಹಿಳೆಯರು ಕೆರೆಗೆ ಹಾರವಾದ ನಿದರ್ಶನ ದೊರಕುತ್ತದೆ. ಅವರೆಂದರೆ- ಕೆರೆಗೆಹಾರದ ಭಾಗೀರಥಿ, ಕೆರೆಹೊನ್ನಮ್ಮ, ಹುಳಿಯಾರು ಕೆಂಚಮ್ಮ, ಮಲ್ಲಿಗೆ ಮಾದೇವಿ, ಒಡ್ಡರಬೋಯಿ, ಮದಗದ ಕೆಂಚಮ್ಮ, ಗರತಿ ಗಂಗವ್ವ, ಅಣಜಿ ಹೊನ್ನಮ್ಮ ಪ್ರಮುಖರಾದವರು.