ಕೆಸರಲ್ಲಿ ತಾವರೆ ಹುಟ್ಟಿ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕೆಸರಲ್ಲಿ ತಾವರೆ ಹುಟ್ಟಿ ದೇವರ ಮಂಡೆಯಲ್ಲಿರದೆ ? ಉಚ್ಛಿಷ್ಟದಲ್ಲಿ
ಜಲಮಲಾದಿಗಳಲ್ಲಿ
ಸಮಸ್ತಜಗದಲ್ಲಿ
ಸೂರ್ಯನ ಪ್ರಭೆ ಇದ್ದಡೇನು ಅಲ್ಲಿ ಅದು ಸಿಕ್ಕಿಹುದೆ ? ಹೊಲೆಹದಿನೆಂಟು ಜಾತಿ ನೂರೊಂದು ಕುಲದಲ್ಲಿ ಶರಣನು ಹುಟ್ಟಿದಡೆ
ಆ ಜಾತಿ-ಕುಲದಂತಿರಬಲ್ಲನೆ ? ಸಾಕ್ಷಾತ್ ಪರಬ್ರಹ್ಮವೆ ಇಹ [ಲೋಕದಲ್ಲಿ] ಸಂಸಾರಿಯಾಗಿ ಬಂದನೆಂದರಿವುದು. ಬಹಿರಂಗದಲ್ಲಿ ಕ್ರಿಯಾರಚನೆ
ಅಂತರಂಗದಲ್ಲಿ ಅರುಹಿನ ಸ್ವಾನುಭಾವಸಿದ್ಧಾಂತ ಪರಿಪೂರ್ಣ ಶರಣನ
ಈ ಮತ್ರ್ಯದ ನರಕಿ ಪ್ರಾಣಿಗಳು ಜರಿವರು. ಕ್ರಿಯಾಚಾರವಿಲ್ಲದೆ
ಅರುಹಿನ ನೆಲೆಯನರಿಯದೆ
ನಾನೇ ದೇವರೆಂದು ಅಹಂಕರಿಸಿಕೊಂಡಿಪ್ಪ ಅನಾಚಾರಿ ಹೊಲೆಯರಿಗೆ ಅಘೋರನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವರಲ್ಲಿ ಬಸವೇಶ್ವರದೇವರು ಸಾಕ್ಷಿಯಾಗಿ.