ಕೇಳು ಕೇಳಯ್ಯಾ ಕರುಣಿ ನೀವು ಎನ್ನ ಮತ್ರ್ಯಲೋಕಕ್ಕೆ ಕಳುಹಿದಿರಾಗಿ ನಾನು ಮರವೆಯ ತನುವ ತಾಳಿ ಅರುಹ ಮರೆತು ಧರಣಿಯ ವ್ಯಾಪಾರದಲ್ಲಿ ದಿಕ್ಕುಗೆಟ್ಟೆನಯ್ಯಾ. ಭಕ್ತದೇಹಿಕದೇವನೆಂಬ ಶ್ರುತಿಯ ಮರೆಯಲಾಗದಯ್ಯಾ. ನಿನ್ನ ಕಂದನೆಂದು ಎನ್ನ ಕರವಿಡಿದು ತಲೆದಡಹಿ ಪೂರ್ಣಜ್ಞಾನದ ಕಣ್ಣುದೆರೆಸಯ್ಯಾ ಅಖಂಡೇಶ್ವರಾ.