ಕೊಟ್ಟುದೊಂದು ಸೂತಕಮುಟ್ಟಿದುದೊಂದು ಸೂತಕ ಕೊಟ್ಟು ಕೊಂಬುದೊಂದು ಸೂತಕ. ಲಿಂಗನಿಜಾಯತಂಗೆ ಇವೆಲ್ಲಿಯವು? ಕೂಡಲಚೆನ್ನಸಂಗಾ ಲಿಂಗ ನಾನೆಂಬ ಸೂತಕವಿಲ್ಲಾಗಿ.