ಕೋಣನನೂ ಕುದುರೆಯನೂ; ಹಾವನೂ ಹದ್ದನೂ; ಮೊಲನನೂ ನಾಯನೂ ಇಲಿಯನೂ ಬೆಕ್ಕನೂ ಹುಲಿಯನೂ ಹುಲ್ಲೆಯನೂ_ಮೇಳೈಸುವಂತೆ ಮೇಳವಿಲ್ಲದವನ ಒಕ್ಕತನ ಅಳಿಯ ಬಾಳುವೆ ಕಾಡಬೆಕ್ಕಿಂಗೆ ತುಯ್ಯಲನಿಕ್ಕುವಂತೆ !_ಕೇಳು ಗುಹೇಶ್ವರಾ ನಿರಾಳ ಬೋಳಿಂಗೆ ತೊಂಡಿಲ ಮುಡಿಸುವಂತೆ